ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಶಿವಮೊಗ್ಗ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆ ಅನಿತಾ ರವಿಶಂಕರ್ ಅವರ ಜಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೈಕೋರ್ಟ್ ಮಟ್ಟಿಲೇರಬೇಕಾಗುತ್ತದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ಸದಸ್ಯೆ ಕಾರ್ಪೊರೇಟರ್ ಅನಿತಾ ರವಿಶಂಕರ್, ಮೇಯರ್ ಹುದ್ದೆಯ ಆಕಾಂಕ್ಷಿ. ಆದರೆ ಅವರು ಸಲ್ಲಿಸಿರುವ ಜಾತಿ ದೃಢೀಕರಣ ಪತ್ರ ಸಾಕಷ್ಟು ಸಂಶಯವನ್ನು ಹುಟ್ಟು ಹಾಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಅವರು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಅವರಿಂದ ಜಾತಿ ದೃಢೀಕರಣ ಪತ್ರವನ್ನು (ಬಿಸಿಎಂ-ಬಿ) ಪಡೆದಿದ್ದಾರೆ. ಇದಕ್ಕಾಗಿ ನೀಡಿದ ಪ್ರಮಾಣ ಪತ್ರದಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರಿಗೂ ಆಸ್ತಿ, ಜಮೀನು ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣಪತ್ರದಲ್ಲಿ, ಜಮೀನು, ಆಸ್ತಿ, ಕಾರು ಮತ್ತು ಇತರೆ ವಾಹನ ಬಗ್ಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ ಎಂದರು.
ಅನಿತಾ ರವಿಶಂಕರ್ ಅವರು 2018 ರ ಆಗಸ್ಟ್ 16 ರಂದು ಶಿವಮೊಗ್ಗ ತಹಶೀಲ್ದಾರ್ ಅವರಿಗೆ ಜಾತಿ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ಒಂದೇ ದಿನದಲ್ಲಿ ತಹಶಿಲ್ದಾರ್ ಅವರು ಅನಿತಾ ರವಿಶಂಕರ್ ಅವರಿಗೆ, ಜಾತಿ ದೃಢೀಕರಣ ಪತ್ರ ನೀಡಿದ್ದಾರೆ. ಈ ತರಾತುರಿಯು ಸಂಶಯಾಸ್ಪದವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಜಾತಿ ದೃಢೀಕರಣ ಪತ್ರ ನೀಡಿದ ಅನುಮಾನ ಇದೆ ಎಂದು ಯಮುನಾ ರಂಗೇಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಪಕ್ಷದ ಮಹಿಳಾ ಮುಖಂಡರಾದ ಸೌಗಂಧಿಕ, ಸ್ಟೆಲ್ಲಾ ಮಾರ್ಟಿನ್, ಅರ್ಚನಾ, ರೇಷ್ಮಾ, ಕವಿತಾ, ಗೀತಾ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.
- ಮಗು ಮೃತದೇಹ ಕಚ್ಚಿಕೊಂಡು ಶಿವಮೊಗ್ಗದ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ, ಯಾರ ಮಗು?
- ಬಾಳೆಬರೆ ಘಾಟ್, ಇನ್ನೂ 10 ದಿನ ವಾಹನ ಸಂಚಾರ ನಿಷೇಧ
- ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್ ಗೊಂದಲ ಕ್ಲಿಯರ್, ಡಿಕೆಶಿ ನೇತೃತ್ವದಲ್ಲಿ ಸಂಧಾನ ಸಭೆ ಸಕ್ಸಸ್, ಏನಾಯ್ತು ಚರ್ಚೆ?
- ಪಿಳ್ಳಂಗಿರಿಯಲ್ಲಿದ್ದ ಮತಗಟ್ಟೆ ಬದಲಾವಣೆ, ಹೊಸ ಮತಗಟ್ಟೆ ಎಲ್ಲಿದೆ?
- ಶಿವಮೊಗ್ಗದ ಇಂಡಸ್ಟ್ರಿಯಲ್ ಏರಿಯಾದ ಸಂಸ್ಥೆಯೊಂದರ ವಿರುದ್ಧ ಜಿಂದಾಲ್ ಕಂಪನಿ ದೂರು, ಕಾರಣವೇನು?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]