SHIVAMOGGA LIVE NEWS | 8 SEPTEMBER 2023
SAGARA : ಬಾವಿ (Well) ತೆಗೆಯುವ ಕಾಮಗಾರಿ ವೇಳೆ ಕಾರ್ಮಿಕ ಮೃತಪಟ್ಟಿರುವ ಘಟನೆ ಸಾಗರದ ನೆಹರೂ ನಗರ ಬಡಾವಣೆಯಲ್ಲಿ ನಡೆದಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್ ಓಡಿಸಿ ಸಿಕ್ಕಿಬಿದ್ದ ಮಗ, ಅಪ್ಪನಿಗೆ 25 ಸಾವಿರ ರೂ. ದಂಡ, ಏನಿದು ಕೇಸ್?
ಮೋಹನ (55) ಮೃತ ಕಾರ್ಮಿಕ. ಮೂವರು ಕಾರ್ಮಿಕರು ನಿರ್ಮಾಣ ಹಂತದಲ್ಲಿದ್ದ ಬಾವಿಯಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಬಾವಿಯ ಮೇಲ್ಬಾದಿಂದ ಕಲ್ಲು ಉರುಳಿ ಮೋಹನ್ ಅವರ ತಲೆ ಮೇಲೆ ಬಿದ್ದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಮೃತ ಮೋಹನ್ ಕಂಬಳಿಕೊಪ್ಪದವರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಇವತ್ತಿನ TOP 15 NEWS | ಓದಲು ಇಲ್ಲಿ ಕ್ಲಿಕ್ ಮಾಡಿ
