ಶಿವಮೊಗ್ಗ ಲೈವ್.ಕಾಂ | 27 ಫೆಬ್ರವರಿ 2019
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 77 ವರ್ಷ ಪೂರೈಸಿದ ಹಿನ್ನೆಲೆ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ ವಿವಿಧ ದೇಗುಲಕ್ಕೆ ತೆರಳಿದ್ದ ಬಿ.ವೈ.ರಾಘವೇಂದ್ರ, ವಿಶೇಷ ಪೂಜೆ ಸಲ್ಲಿಸಿದರು.

ಸಂಭ್ರಮದ ಬರ್ತಡೆಗೆ ಬ್ರೇಕ್
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನ ಮತ್ತು ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಯೋಧರು ವೀರಮರಣವನ್ನಪ್ಪಿದ ಹಿನ್ನೆಲೆ, ಈ ಬಾರಿ ಹುಟ್ಟುಹಬ್ಬ ಆಚರಿಸದಿರಲು ಯಡಿಯೂರಪ್ಪ ನಿರ್ಧರಿಸಿದ್ದರು. ಹಾಗಾಗಿ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹಿನ್ನೆಲೆ, ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರಲಿಲ್ಲ.

ಅರಣ್ಯವಾಸಿಗಳನ್ನು ತೆರವುಗೊಳಿಸುವ ಸುಪ್ರೀ ಕೋರ್ಟ್ ಆದೇಶದ ವಿರುದ್ಧ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ಜಾಥಾ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಗೆ ಆಗಮಿಸಿದ್ದ ಯಡಿಯೂರಪ್ಪ ಅವರಿಗೆ, ಬಿಜೆಪಿ ಮುಖಂಡರು ಮತ್ತು ಕೆಲವು ಪ್ರಮುಖರು ಪ್ರವಾಸಿ ಮಂದಿರದಲ್ಲಿ ಹೂಗುಚ್ಛ ನೀಡಿ, ಶುಭಕೋರಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]