ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದಕ್ಕೆ ಐದು ತಿಂಗಳ ಬಳಿಕ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಮೃತ ಯುವಕನ ಅಣ್ಣನನ್ನೇ ಪೊಲೀಸರು ಬಂಧಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಾಗರ ತಾಲೂಕು ಅಂದಾಸುರ ಗ್ರಾಮದ ಹರೀಶ್ (29) ವಿಷ ಸೇವಿಸಿ ಮೃತಪಟ್ಟಿದ್ದ ಎಂದು ಹೇಳಲಾಗಿತ್ತು. ಆದರೆ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅಣ್ಣನಿಂದಲೇ ತಮ್ಮ ಹತ್ಯೆಯಾಗಿರುವುದು ತಿಳಿದು ಬಂದಿದೆ.
ಏನಿದು ಪ್ರಕರಣ? ಹೇಗಾಯ್ತು ಘಟನೆ?
ಮೇ 8ರ ರಾತ್ರಿ ಹರೀಶನ ಮನೆಯಲ್ಲಿ ಗಲಾಟೆಯಾಗಿದೆ. ಮನನೊಂದು ಹರೀಶ, ಭತ್ತದ ಬೆಳೆಗೆ ಬಳಸುವ ಔಷಧವನ್ನು ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡ ಹರೀಶನನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಹರೀಶ ಕೊನೆಯುಸಿರೆಳೆದಿದ್ದ.
ಅನುಮಾನಗೊಂಡ ಪೋಷಕರಿಂದ ದೂರು
ಹರೀಶನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಆತನ ತಂದೆ, ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಿಂದ ಇದು ಆತ್ಮಹತ್ಯೆಯಲ್ಲ, ಕೊಲೆ ಅನ್ನುವುದು ಸ್ಪಷ್ಟವಾಗಿತ್ತು. ಹರೀಶನ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿರುವುದು ಖಚಿತವಾಗಿತ್ತು.
ಅಣ್ಣನ ಮೇಲೆ ಅನುಮಾನ
ತನಿಖೆ ವೇಳೆ ಹರೀಶನ ಅಣ್ಣನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಹರೀಶನ ಕೊಲೆ ಮಾಡಿರುವುದನ್ನು ಅಣ್ಣ ಒಪ್ಪಿಕೊಂಡಿದ್ದಾನೆ. ಮೇ 8ರಂದು ರಾತ್ರಿ ಹರೀಶ ವಿಷ ಸೇವಿಸಿರುತ್ತಾನೆ. ಈ ವೇಳೆ ಹರೀಶನ ಅಣ್ಣ ಮನೆಯ ಮುಂದಿದ್ದ ಕಬ್ಬಿಣ ರಾಡ್ ಒಂದರಿಂದ, ಹರೀಶನ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ. ಅಷ್ಟರಲ್ಲಾಗಲೆ ಊರಿನ ಜನ ಸೇರಿದ್ದರಿಂದ ಹರೀಶ ವಿಷ ಸೇವಿಸಿದ್ದಾನೆ ಎಂದು ಹಬ್ಬಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ತಮ್ಮನ ಹತ್ಯೆಗೆ ಅಣ್ಣ ಯೋಚಿಸಿದ್ದೇಕೆ?
ಹರೀಶನನ್ನು ಅಣ್ಣನೆ ಹತ್ಯೆಗೈದಿರುವ ವಿಚಾರ ಸ್ಪಷ್ಟವಾಗುತ್ತಿದ್ದಂತೆ, ಕಾರಣ ವಿಚಾರಿಸಿದ್ದಾರೆ. ತಂದೆಯ ಆಸ್ತಿಯಲ್ಲ ತನ್ನ ಪಾಲಿಗೆ ಬರುತ್ತದೆ ಎಂಬ ದುರುದ್ದೇಶದಿಂದ ಹರೀಶನ ಅಣ್ಣನೆ, ಹರೀಶನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಹರೀಶ ಮೃತಪಟ್ಟು ಐದು ತಿಂಗಳ ಬಳಿಕ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಹರೀಶನ ಅಣ್ಣನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
Satya meva jayathe
ಸತ್ಯ ಮೇವ ಜಯತೇ 🇮🇳 Salute to our police department…( ಸಾಗರ ಗ್ರಾಮಾಂತರ)