SHIVAMOGGA LIVE NEWS | RESCUE | 19 ಮೇ 2022
ಭಾರಿ ಮಳೆಗೆ ಶಿವಮೊಗ್ಗದ ಟಿಪ್ಪು ನಗರ ಮತ್ತು ಆರ್.ಎಂ.ಎಲ್ ನಗರದ ಕೆಲ ಭಾಗ ಜಲಾವೃತವಾಗಿತ್ತು. ಮಳೆ ನೀರು ರಸ್ತೆ ತುಂಬ ಹರಿದು, ಮನೆಗಳಿಗೆ ನುಗ್ಗಿತ್ತು. ಇದರಿಂದ ಮನೆಯಲ್ಲಿದ್ದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಇನ್ನು, ಇವೆರಡು ಬಡಾವಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಎಸ್.ಡಿ.ಪಿ.ಐ ಸಂಘಟನೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರನ್ನು ಮನೆಗಳಿಂದ ಕರೆತಂದು ಸಾಂತ್ವನ ಕೇಂದ್ರಳಿಗೆ ಬಿಟ್ಟಿದ್ದಾರೆ.
ತೆಪ್ಪ ಬಳಸಿ ಸ್ಥಳೀಯರನ್ನು ರಕ್ಷಣೆ ಮಾಡಲಾಗುತ್ತಿದೆ. ಟಿಪ್ಪು ನಗರದ ಉಮರ್ ಫಾರೂಕ್ ಮದರಸಾ, ಆರ್.ಎಂ.ಎಲ್ ನಗರದ ಅಲ್ ಮಹಮೊದ್ ಶಾಲೆಯಲ್ಲಿ ಸಾಂತ್ವನ ಕೇಂದ್ರ ತೆರೆಯಲಾಗಿದೆ. ಸುಮಾರು 15 ಕುಟುಂಬಗಳು ಇಲ್ಲಿವೆ.
ಮಳೆ ತಗ್ಗಿದ ಹಿನ್ನೆಲೆಯಲ್ಲಿ ಟಿಪ್ಪು ನಗರದ ಕೆಲವು ಕುಟುಂಬಗಳು ಸಾಂತ್ವನ ಕೇಂದ್ರದಿಂದ ಮನೆಗೆ ಮರಳಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ಮತ್ತೊಂದು ದಿನ ರಜೆ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.