ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಆಗಸ್ಟ್ 2020
ತುಂಗಾ ನದಿ ಸೇತುವೆಯಿಂದ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರ ನೆರವಿನಿಂದ ಯುವತಿಯನ್ನು ರಕ್ಷಿಸಲಾಗಿದೆ. ಯುವಕ ಇನ್ನು ಪತ್ತೆಯಾಗಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹೇಗಾಯ್ತು ಘಟನೆ?
ಬೈಪಾಸ್ ರಸ್ತೆಯಲ್ಲಿರುವ ತುಂಗಾ ನದಿ ಸೇತುವೆಯಿಂದ ಪ್ರೇಮಿಗಳು ತುಂಗಾ ಹೊಳೆಗೆ ಹಾರಿದ್ದಾರೆ. ಯುವತಿಯ ವೇಲಿನಿಂದ ಇಬ್ಬರು ಕಟ್ಟಿಕೊಂಡು ಹೊಳೆಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಸ್ಥಳೀಯರಿಂದ ಯುವತಿಯ ರಕ್ಷಣೆ
ಹೊಳೆಗೆ ಜಿಗಿಯುತ್ತಿದ್ದಂತೆ ಕಟ್ಟಿಕೊಂಡಿದ್ದ ವೇಲ್ ಬಿಚ್ಚಿಕೊಂಡಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ. ಹೊಳೆ ಬದಿಯಲ್ಲಿ ಯುವತಿ ಸಿಕ್ಕಿಬಿದ್ದಿದ್ದಾಳೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಯುವತಿಯ ರಕ್ಷಣೆ ಮಾಡಿದ್ದಾರೆ. ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಪ್ಪಲಿ, ಮೊಬೈಲು, ಗುಲಾಬಿ ಹೂವು
ಹೊಳೆಗೆ ಹಾರುವ ಮೊದಲು ಪ್ರೇಮಿಗಳು ತಮ್ಮ ಮೊಬೈಲು, ಚಪ್ಪಲಿ, ಒಂದು ಗುಲಾಬಿ ಹೂವನ್ನು ಸೇತುವೆ ಬಳಿ ಇಟ್ಟಿದ್ದಾರೆ. ಇವುಗಳನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು ಯುವಕನ ಶೋಧ ಕಾರ್ಯ ನಡೆಸಲಾಗುತ್ತಿದೆ.
ಪ್ರೇಮಿಗಳು ಹೊಳೆಗೆ ಹಾರಿದ ವಿಚಾರ ತಿಳಿಯುತ್ತಿದ್ದಂತೆ ಸೇತುವೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]