ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

ಶಿವಮೊಗ್ಗ: ಶ್ರೀ ಗುಡ್ಡೇಕಲ್ ಗವಿಸಿದ್ದೇಶ್ವರ, ಉಚ್ಚಂಗಿಯಮ್ಮ ಹಾಗೂ ದುರ್ಗಮ್ಮ ಸೇವಾ ಸಮಿತಿ ವತಿಯಿಂದ ವಿದ್ಯಾನಗರದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭವಾಗಿದೆ. ಮಾರ್ಚ್ 13ರವರೆಗೆ ಜಾತ್ರೆ ಜರುಗಲಿದೆ. (Grand Decorations) ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಐದು ದಿನ ಏನೇನು ಕಾರ್ಯಕ್ರಮ ಇರಲಿದೆ?

Vidyanagara-Durgamma-Devi-jathre

ಮಾರ್ಚ್ 9: ಶ್ರೀ ಗವಿಸಿದ್ಧೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

Vidyanagara-Durgamma-Devi-jathre

ಮಾರ್ಚ್ 10: ಬೆಳಗ್ಗೆ ಉಚ್ಚಂಗಿಯಲ್ಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ, ರಾತ್ರಿ 9 ಗಂಟೆಗೆ ತುಂಗಾ ನದಿಯಲ್ಲಿ ಗಂಗಾಪೂಜೆ ಮತ್ತು ರಾಜಬೀದಿ ಉತ್ಸವ ನಡೆಯಲಿದೆ.

ಮಾರ್ಚ್ 11: ಭಕ್ತರು ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

Vidyanagara-Durgamma-Devi-jathre

ಮಾರ್ಚ್ 12: ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ರಸಮಂಜರಿ ಆಯೋಜಿಸಲಾಗಿದೆ.

ಮಾರ್ಚ್ 13: ಮಹಾಮಂಗಳಾರತಿ, ಅನ್ನಸಂತರ್ಪಣೆ ಹಾಗೂ ಸಂಜೆ ಅದ್ಧೂರಿ ಮೆರವಣಿಗೆಯೊಂದಿಗೆ ಅಮ್ಮನವರ ವಿಸರ್ಜನೆ ನೆರವೇರಲಿದೆ.

ಇದನ್ನೂ ಓದಿ – ಮಾರಿಕಾಂಬ ದೇವಸ್ಥಾನ ಸಮಿತಿಗೆ ನೂತನ ನಿರ್ದೇಶಕರ ಆಯ್ಕೆ, ಯಾರೆಲ್ಲ ಆಯ್ಕೆಯಾಗಿದ್ದಾರೆ?

ಜಾತ್ರೆಗಾಗಿ ಅದ್ಧೂರಿ ಸಿದ್ಧತೆ

Vidyanagara-Durgamma-Devi-jathre

‍ಶ್ರೀ ದುರ್ಗಮ್ಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆ ವಿದ್ಯಾನಗರದಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ಬಿ.ಹೆಚ್‌.ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಮೂರು ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ವಿದ್ಯಾನಗರದಲ್ಲಿ ಇದೇ ಮೊದಲು ಬೃಹತ್‌ ಮಹಾದ್ವಾರ ಸಿದ್ಧಪಡಿಸಲಾಗುತ್ತಿದೆ. ಇನ್ನು, ದುರ್ಗಮ್ಮ ದೇವಸ್ಥಾನ, ಗವಿಸಿದ್ದೇಶ್ವರ ಸ್ವಾಮಿ, ಉಚ್ಚಂಗಿಯಲ್ಲಮ್ಮ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಇಂದು ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

Vidyanagara-Durgamma-Devi-jathre
v5
Vidyanagara-Durgamma-Devi-jathre
Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment