
ಶಿವಮೊಗ್ಗ ಲೈವ್.ಕಾಂ |SHIMOGA NEWS | 9 NOVEMBER 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆ ಮತ್ತೆ ಮುಂದಕ್ಕೆ ಹೋಗಿದೆ. ಕೋರಂ ಕೊರತೆಯಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಎಷ್ಟು ಸದಸ್ಯರು ಇದ್ದರು, ಗೈರಾದವರೆಷ್ಟು?
ಚುನಾವಣೆಯಲ್ಲಿ ಮತ ಚಲಾಯಿಸಲು 14 ಮಂದಿಗೆ ಅವಕಾಶವಿತ್ತು. ಆದರೆ 8 ನಿರ್ದೇಶಕರು ಗೈರಾಗಿದ್ದರು. ಶೇ.50ಕ್ಕಿಂತಲೂ ಕಡಿಮೆ ಸದಸ್ಯರು ಇದ್ದಿದ್ದರಿಂದ ಚುನಾವಣೆ ನಡೆಸದೆ, ಮುಂದೂಡಲಾಯಿತು.
VIDEO REPORT
ನಾಮಪತ್ರ ಸಲ್ಲಿಸಿದ್ದವರೇ ಗೈರು..!
ಪ್ರಭಾರ ಅಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದ ಜೆ.ಪಿ.ಯೋಗೇಶ್ ಮತ್ತು ಷಡಾಕ್ಷರಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣೆ ವೇಳೆ ಗೈರಾದ ಎಂಟು ನಿರ್ದೇಶಕರ ಪೈಕಿ ನಾಮಪತ್ರ ಸಲ್ಲಿಸಿದ್ದ ಜೆ.ಪಿ.ಯೋಗೇಶ್ ಮತ್ತು ಷಡಾಕ್ಷರಿ ಅವರು ಗೈರಾಗಿ, ಅಚ್ಚರಿ ಮೂಡಿಸಿದರು. ಬೆಳಗ್ಗೆ ಇವರಿಬ್ಬರು ನಾಮಪತ್ರ ಸಲ್ಲಿಸುವ ವೇಳೆ, ಜೆಡಿಎಸ್, ಕಾಂಗ್ರೆಸ್‍ನ ಉಳಿದೆಲ್ಲ ನಿರ್ದೇಶಕರು ಹಾಜರಿದ್ದರು.
ಈಗಿರೋದು ಇನ್ನೊಂದೆ ಅವಕಾಶ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇನ್ನೊಂದು ವಾರದಲ್ಲಿ ಮತ್ತೆ ಚುನಾವಣೆ ಘೋಷಣೆ ಆಗಲಿದೆ. ಒಂದು ವೇಳೆ ಆಗಲೂ ಚುನಾವಣೆ ಮುಂದೂಡುವಂತಹ ಪರಿಸ್ಥಿತಿ ಎದುರಾದರೆ, ಚುನಾವಣೆಗೆ ಸದಸ್ಯರು ಸಹಕರಿಸುತ್ತಿಲ್ಲ ಎಂದು ಇಲಾಖೆಗೆ ವರದಿ ಒಪ್ಪಿಸಬಹುದಾಗಿದೆ. ಇದರ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಂಡು, ಸೂಪರ್ ಸೀಡ್ ಮಾಡುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.


ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






