ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA NEWS | 3 DECEMBER 2020
ಬಜರಂಗದಳ ಕಾರ್ಯಕರ್ತನೊಬ್ಬನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಆಗಿದ್ದು ಎಲ್ಲಿ? ಏಕೆ?
ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಘಟನೆ ಸಂಭವಿಸಿದೆ. ಬಜರಂಗದಳ ಸಹ ಸಂಚಾಲಕ ನಾಗೇಶ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಬೆಳಗ್ಗೆ ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್ ಮಾಡಲು ಬರುತ್ತಿದ್ದಾಗ ಹಲ್ಲೆಯಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನೆಯಾಗಿದ್ದು ಹೇಗೆ?
ನಾಗೇಶ್ ಬೈಕ್‍ನಲ್ಲಿ ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ನಾಗೇಶ್ ಮೂಗಿನ ಮೇಲೆ ಗಂಭೀರವಾಗಿ ಗಾಯವಾಗಿದೆ. ಹಲ್ಲೆಯಾಗುತ್ತಿದ್ದಂತೆ ನಾಗೇಶ್ ತಪ್ಪಿಸಿಕೊಂಡಿದ್ದು, ಸ್ನೇಹಿತರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆ ಮುಂದೆ ಕಾರ್ಯಕರ್ತರ ದಂಡು
ವಿಚಾರ ತಿಳಿಯುತ್ತಿದ್ದಂತೆ ಬಜರಂಗದಳ ಸಂಘಟನೆ ಮುಖಂಡರು, ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿದರು. ನಾಗೇಶ್ ಆರೋಗ್ಯ ಸ್ಥಿತಿ ವಿಚಾರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆ ಆಗಿದ್ದರಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

- ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

About The Editor
ನಿತಿನ್ ಆರ್.ಕೈದೊಟ್ಲು





