ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 6 DECEMBER 2020
ಗಲಭೆ, ನಿಷೇಧಾಜ್ಞೆಯಿಂದಾಗಿ ಸ್ಥಬ್ಧವಾಗಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಜನ, ವಾಹನ ಸಂಚಾರ ಆರಂಭವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು, ಹಳೆ ಶಿವಮೊಗ್ಗ ಭಾಗದಲ್ಲಿ ಜನ ಮತ್ತು ವಾಹನ ಸಂಚಾರವಿಲ್ಲ. ಉಳಿದೆಡೆ ವಾಹನ ಸಂಚಾರ ಸಾಮಾನ್ಯ ದಿನದ ಹಾಗೆ ಇದೆ.
ಹಳೆ ಶಿವಮೊಗ್ಗದಲ್ಲಿ ಬೆರಳೆಣಿಕೆ ಜನ
ಬಿ.ಹೆಚ್.ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದೆ. ಕೋಟೆ ರಸ್ತೆ, ಬಿ.ಬಿ.ಸ್ಟ್ರೀಟ್, ರವಿ ವರ್ಮಾ ಬೀದಿ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಬೆರಳೆಣಿಕೆಯಷ್ಟು ಜನ ಕಾಣಸಿಗುತ್ತಾರೆ. ಗಾಂಧಿ ಬಜಾರ್‍ನಲ್ಲಿ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೊಲೀಸ್ ವಾಹನಗಳಷ್ಟೇ ಗಾಂಧಿ ಬಜಾರ್ ಕಾಣಿಸುತ್ತವೆ.
ಇನ್ನು, ದುರ್ಗಿಗುಡಿ, ಎ.ಎ.ಸರ್ಕಲ್‍ನಿಂದ ಅಶೋಕ ಸರ್ಕಲ್‍ನವರೆಗಿನ ಬಿ.ಹೆಚ್.ರಸ್ತೆ, ಸಾಗರ ರಸ್ತೆ, ಎನ್.ಟಿ.ರಸ್ತೆ, ಶಿವಮೊಗ್ಗ ಬೈಪಾಸ್ ರಸ್ತೆ, ವಿನೋಬನಗರದ ನೂರು ಅಡಿ ರಸ್ತೆಯಲ್ಲಿ ವಾಹನ ಸಂಚಾರವಿದೆ. ಕೆಲವು ಅಂಗಡಿಗಳ ಬಾಗಿಲು ತೆಗೆಯಲಾಗಿದ್ದು, ವ್ಯಾಪಾರ ನಡೆಯುತ್ತಿದೆ.
ಕೆಲವೇ ಗಂಟೆಯಲ್ಲಿ ನಿಷೇಧಾಜ್ಞೆ ತೆರವು
ಶಿವಮೊಗ್ಗದಲ್ಲಿ ಇನ್ನು ಕೆಲವೆ ಗಂಟೆಯಲ್ಲಿ ನಿಷೇಧಾಜ್ಞೆ ತೆರವು ಮಾಡಲಾಗುತ್ತಿದೆ. ಡಿಸೆಂಬರ್ 7ರಂದು ಬೆಳಗ್ಗೆ 10 ಗಂಟೆಗೆ ನಿಷೇಧಾಜ್ಞೆ ತೆರವಾಗಲಿದೆ. ಯಾವುದೆ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಮುಂದುವರೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ನಿಷೇಧಾಜ್ಞೆ ತೆರವಾದರೂ ಬಂದೋಬಸ್ತ್ ಮುಂದುವರೆಯಲಿದೆ.
VIDEO REPORT
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]