ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೊಸನಗರ: ನಗರ ಅರಣ್ಯ ಇಲಾಖೆ (Forest Department) ವಿರುದ್ಧ ರೈತರು ನಡೆಸಿದ ಪ್ರತಿಭಟನೆಗೆ ಅರಣ್ಯ ಇಲಾಖೆ ಮಣಿದಿದೆ. ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆಯುವುದಾಗಿ ಅರಣ್ಯ ಇಲಾಖೆ ವ್ಯವಸ್ಥಾಪನಾಧಿಕಾರಿ ಘೋಷಿಸಿದ್ದು, ಇದರಿಂದ ರೈತರು ತಮ್ಮ ಹೋರಾಟ ಹಿಂಪಡೆದಿದ್ದಾರೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ತಾಲೂಕಿನ ನಗರ ಹೋಬಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವಲಯ ಅರಣ್ಯ ಇಲಾಖೆ ಕಚೇರಿಗೆ ಬಂದ ಅರಣ್ಯ ಇಲಾಖೆ ವ್ಯವಸ್ಥಾಪನಾಧಿಕಾರಿ ರಾಮಕೃಷ್ಣ ಅವರು ರೈತರ ಅಹವಾಲುಗಳನ್ನು ಆಲಿಸಿದರು.

Farmers-protest-against-Forest-officials-for-issuing-notice

Farmers-protest-against-Forest-officials-for-issuing-notice

ನೋಟಿಸ್ ವಾಪಸ್ ಪಡೆಯಲಾಗಿದೆ. ಇದು ರೈತರ ಹಿತದೃಷ್ಟಿಯಿಂದ ಉತ್ತಮವಲ್ಲ. ಹಾಗಾಗಿ, ಗ್ರಾಮದಲ್ಲಿರುವ ಜನವಸತಿ, ಜಾನುವಾರು, ಜಮೀನುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದಲ್ಲಿ ವಾಸ್ತವದ ಮಾಹಿತಿ ನೀಡಲು ಪೂರಕವಾಗುತ್ತದೆ ಎಂದರು.

ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವ್ಯವಸ್ಥಾಪನಾ ಅಧಿಕಾರಿಗೆ ನೀಡಲು ಪ್ರತಿಭಟನಾ ಸಭೆಯಲ್ಲಿ ನಿರ್ಧರಿಸಲಾಯಿತು. ಈ ವೇಳೆ ರೈತರು ಅರಣ್ಯ ಇಲಾಖೆ ಕಚೇರಿಯಿಂದ ನಗರ ನಾಡಕಚೇರಿವರೆಗೆ ಮೆರವಣಿಗೆ ನಡೆಸಿದರು.

Farmers-protest-against-Forest-officials-for-issuing-notice

ಇದನ್ನೂ ಓದಿ – ಚಿಕ್ಕಮಗಳೂರಿನಲ್ಲಿ ತಿಂಗಳಿಗೆ ₹18,000 ಸಂಬಳದ ಕೆಲಸ ಖಾಲಿ ಇದೆ, 15 ಮಂದಿಗೆ ಅವಕಾಶ

ನಗರ ಹೋಬಳಿಯಲ್ಲಿ ನಿರಂತರ ದೌರ್ಜನ್ಯ ಮಾಡಲಾಗುತ್ತಿದೆ. ಎಲ್ಲಾ ವಿಚಾರದಲ್ಲೂ ನಗರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೂಡಲೇ ಸರ್ಕಾರ ನಗರ ಹೋಬಳಿ ಬಗ್ಗೆ ಗಮನ ಹರಿಸದಿದ್ದಲ್ಲಿ ಇತಿಹಾಸದಲ್ಲಿ ನಡೆದ ನಗರ ದಂಗೆ ಮತ್ತೆ ಮರುಕಳಿಸಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

Farmers-protest-against-Forest-officials-for-issuing-notice

ಮಾಜಿ ಶಾಸಕ ಬಿ.ಸ್ವಾಮಿರಾವ್, ಸಾಮಾಜಿಕ ಹೋರಾಟಗಾರ ತೀ.ನಾ.ಶ್ರೀನಿವಾಸ್, ರಮೇಶ ಹಲಸಿನಹಳ್ಳಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸುರೇಶ ಸ್ವಾಮಿರಾವ್, ಸತೀಶ ಪಟೇಲ್, ಕರುಣಾಕರ ಶೆಟ್ಟಿ, ನಗರ ನಿತಿನ್, ಸುಮಾ ಸುಬ್ರಹ್ಮಣ್ಯ, ರಮಾಕಾಂತ, ವಿನಾಯಕ ಚಕ್ಕಾರು, ಕೊಡಸೆ ಚಂದ್ರಪ್ಪ ಗಣೇಶ ಬೆಳ್ಳಿ, ಗ್ರೆಗೋರಿ ರೆಬೆಲ್ಲೋ, ಸಂತೋಷ ಕುಮಾರ, ಗೋಪಾಲ ಶೆಟ್ಟಿ, ಹೆನ್ರಿ ಡಿಸೋಜ, ಅಣ್ಣಪ್ಪ ಕಾಡಿಗೇರಿ, ಬಾಬು ಕಾಡಿಗೇರಿ, ಗಣೇಶ, ವಿಶ್ವನಾಥ, ನವೀನ್, ಅಂತೋನಿ, ರಾಮಸ್ವಾಮಿ, ವಿಶು, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment