ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೂರದ ಊರುಗಳಿಗೆ ತೆರಳಲು ಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದಿಂದ ಖಾಸಗಿ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರು, ಮೈಸೂರಿಗೆ ಬಸ್‍

ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರಮುಖ ಜಿಲ್ಲೆಗಳಿಗೆ ಶಿವಮೊಗ್ಗದಿಂದ ಬಸ್ ಬಿಡಲಾಗಿದೆ. ಸುಮಾರು 40 ಖಾಸಗಿ ಬಸ್‍ಗಳು ಬೆಳಗ್ಗೆಯಿಂದ ಪ್ರಯಾಣ ಆರಂಭಿಸಿವೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಆ ಭಾಗಕ್ಕೆ ಹೆಚ್ಚಿನ ಬಸ್ ಸೇವೆ ಇದೆ.

ಸರ್ಕಾರಿ ಬಸ್‍ಗಳ ಟಿಕೆಟ್‍ ದರದಲ್ಲಿಯೇ ಪ್ರಯಾಣಿಕರಿಗೆ ಚಾರ್ಜ್ ಮಾಡುತ್ತಿದ್ದೇವೆ ಅನ್ನುತ್ತಾರೆ ಬಸ್ ಕಂಡಕ್ಟರ್‍ಗಳು. ಕೆಎಸ್‍ಅರ್‍ಟಿಸಿ ಬಸ್‍ಗಳು ಸಂಚಾರ ನಿಂತಿರುವುದರಿಂದ ಸಂಕಷ್ಟದಲ್ಲಿರುವ ಪ್ರಯಾಣಿಕರು ಖಾಸಗಿ ಬಸ್ ಸೇವೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ. ತಮ್ಮೂರಿಗೆ ತಲುಪಲು ಅನುಕೂಲವಾಗುತ್ತಿದೆ.

ಬಸ್ ಸಂಚಾರದ ವಿಡಿಯೋ ರಿಪೋರ್ಟ್ ಇಲ್ಲಿದೆ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

Leave a Comment