ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 06 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿದ್ದ ಬೃಹತ್ ಗುಂಡಿಗಳ ಬಾಯಿ ಬಂದ್ ಮಾಡಲಾಗಿದೆ. ಮಣ್ಣು, ಸಿಮೆಂಟ್ ಪೌಡರ್ ಬಳಸಿ ಗುಂಡಿ ಮುಚ್ಚಲಾಗಿದೆ. ಡಾಂಬಾರ್ ಹಾಕದೆ ಇರುವುದರಿಂದ, ಮತ್ತೆ ಗುಂಡಿಗಳು ಪ್ರತ್ಯಕ್ಷವಾಗುವುದು ನಿಶ್ಚಿತವಾಗಿದೆ.
ಹೊಳೆ ಬಸ್ ನಿಲ್ದಾಣದ ಬಳಿ ಎನ್ಸಿಸಿ ಕಚೇರಿ ಮುಂದೆ ಬಿ.ಹೆಚ್.ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳಾಗಿದ್ದವು. ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಕುರಿತು ಶಿವಮೊಗ್ಗ ಲೈವ್.ಕಾಂ ನಲ್ಲಿ ವರದಿ ಪ್ರಕಟವಾಗಿತ್ತು.
ಇದನ್ನೂ ಓದಿ | ಶಿವಮೊಗ್ಗ ವಿದ್ಯಾನಗರ ಕಡೆಗೆ ತೆರಳುವ ವಾಹನ ಸವಾರರೆ ಎಚ್ಚರ.. ಎಚ್ಚರ.. ನಡು ರಸ್ತೆಯಲ್ಲಿ ಕೂತಿದ್ದಾನೆ ಜವರಾಯ
ವರದಿ ಪ್ರಕಟವಾಗುತ್ತಿದ್ದಂತೆ ಅಧಿಕಾರಿಗಳು ಗುಂಡಿಗೆ ಮಣ್ಣು ಹಾಕಿಸಿದ್ದಾರೆ. ಇವತ್ತು ಸಿಮೆಂಟ್ ಪೌಡರ್ ಹಾಕಿ ಗುಂಡಿ ಮುಚ್ಚಿದ್ದಾರೆ. ಈಗ ವಾಹನ ಸವಾರರು ಆರಾಮಾಗಿ ಸಂಚರಿಸುತ್ತಿದ್ದಾರೆ. ಆದರೆ ಇದು ತಾತ್ಕಾಲಿಕ ವ್ಯವಸ್ಥೆ. ಮಳೆ ಬಂದರೆ ಅಥವಾ ಭಾರಿ ಗಾತ್ರದ ವಾಹನಗಳು ಸಂಚರಿಸಿದರೆ, ಪುನಃ ಗುಂಡಿ ಪ್ರತ್ಯಕ್ಷವಾಗಲಿದೆ. ಡಾಂಬಾರು ಹಾಕಿ ಗುಂಡಿ ಮುಚ್ಚಿದರೆ, ಅನುಕೂಲವಾಗಲಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]