ಶಿವಮೊಗ್ಗ ಲೈವ್.ಕಾಂ | SHIMOGA NEWS | 13 MARCH 2021
‘ಹೀರೋ’ ನೋಡಲು ಮುಗಿಬಿದ್ದ ವಿದ್ಯಾರ್ಥಿಗಳು. ಸೆಲ್ಫಿಗಾಗಿ ನಾ ಮುಂದು, ತಾ ಮುಂದು ಎಂದ ಯುವ ಸಮೂಹ.
ಶಿವಮೊಗ್ಗದ ವಿವಿಧ ಕಾಲೇಜುಗಳಿಗೆ ಹೀರೋ ಸಿನಿಮಾ ತಂಡ ಭೇಟಿ ನೀಡಿತ್ತು. ಸಿನಿಮಾದ ಪ್ರಚಾರಕ್ಕಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ | ಶಿವಮೊಗ್ಗಕ್ಕೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಂ, ರಕ್ಷಿತ್ ಶೆಟ್ಟಿ ಜೊತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಜೆಎನ್‍ಎನ್‍ಸಿಇ ಕಾಲೇಜು, ಎಜುರೈಟ್, ಡಿವಿಎಸ್ ಕಾಲೇಜು ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಿನಿಮಾದ ಪ್ರಮೋಷನ್ ನಡೆಸಿದರು.
ಸ್ಟಾರ್‍ಗಳನ್ನು ಕಾಣಲು ವಿದ್ಯಾರ್ಥಿಗಳ ಕಾತುರ
ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರನ್ನು ಕಣ್ತುಂಬಿಕೊಳ್ಳಲು ವಿದ್ಯಾರ್ಥಿಗಳು ಮುಗಿಬಿದ್ದರು. ವಿದ್ಯಾರ್ಥಿಗಳ ಜೊತೆಗೆ ನಟರು ಸಂವಾದ ನಡೆಸಿದರು, ಹಾಡು, ಡೈಲಾಗ್ ಹೇಳಿ ರಂಜಿಸಿದರು. ಈ ವೇಳೆ ನಟರೊಂದಿಗೆ ಸೆಲ್ಫಿಗೂ ವಿದ್ಯಾರ್ಥಿಗಳು ಮುಗಬಿದ್ದರು.
ಪ್ರೇಕ್ಷಕರ ಜೊತೆಗೆ ಸಿನಿಮಾ ವೀಕ್ಷಣೆ
ಶಿವಮೊಗ್ಗ ಮಾರ್ಡನ್ ಚಿತ್ರಮಂದಿರ ಮತ್ತು ಭಾರತ್ ಸಿನಿಮಾಸ್‍ನಲ್ಲಿ ಪ್ರೇಕ್ಷಕರ ಜೊತೆಗೆ ಹೀರೋ ಸಿನಿಮಾ ವೀಕ್ಷಿಸಿದರು. ಭಾರತ್ ಸಿನಿಮಾಸ್‍ನಲ್ಲಿ ಶಿವಮೊಗ್ಗದ ಬಂಟರ ಸಂಘದ ವತಿಯಿಂದ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಟ ಸಂತೋಷ್ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200