ಶಿವಮೊಗ್ಗ : ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸಬೇಕಿದ್ದ ಇಂದಿರಾ ಕ್ಯಾಂಟೀನ್ ಇಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಪರಿವರ್ತನೆಯಾಗಿದೆ. ನಿರ್ಮಾಣವಾಗಿ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್ (Indira Canteen) ಕಟ್ಟಡ ಕುಡುಕರ ಪಾಲಿನ ಸ್ವರ್ಗವಾಗಿದ್ದು, ಅಕ್ರಮ ಚಟುವಟಿಕೆಯ ಅಡ್ಡೆಯಾಗಿದೆ.
ಇದನ್ನೂ ಓದಿ » ಜನರಿಂದ ತಪ್ಪಿಸಿಕೊಳ್ಳುವಾಗ ಗುಂಡಿಗೆ ಬಿದ್ದ ಕಳ್ಳ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರು
ಶಿವಮೊಗ್ಗದ ವಿದ್ಯಾನಗರ ಮುಖ್ಯ ರಸ್ತೆಯಲ್ಲಿ ಈಚೆಗೆ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಈತನಕ ಕ್ಯಾಂಟೀನ್ ಉದ್ಘಾಟನೆಯಾಗಿಲ್ಲ. ಹಾಗಾಗಿ ಕಟ್ಟಡ ಅನಾಥವಾಗಿ ಉಳಿದುಕೊಂಡಿದೆ.
ಕುಡುಕರ ಅಡ್ಡೆಯಾದ ಇಂದಿರಾ ಕ್ಯಾಂಟೀನ್
ವಿದ್ಯಾನಗರದ ಇಂದಿರಾ ಕ್ಯಾಂಟೀನ್ ಕುಡುಕರ ಅಡ್ಡೆಯಾಗಿದೆ. ಮದ್ಯದ ಅಂಗಡಿಯಿಂದ ಮದ್ಯ ತಂದು ಇಂದಿರಾ ಕ್ಯಾಂಟೀನ್ ಕಟ್ಟಡದೊಳಗೆ ಕುಡಿಯುತ್ತಿದ್ದಾರೆ. ಬಿಯರ್ ಬಾಟಲಿಗಳು, ಮದ್ಯದ ಪೌಚ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಹಾಗಾಗಿ ಇಂದಿರಾ ಕ್ಯಾಂಟೀನ್ (Indira Canteen) ಒಳಾಂಗಣದಲ್ಲಿ ರಾಶಿ ರಾಶಿ ಮದ್ಯದ ಪೌಚುಗಳು ಬಿದ್ದಿವೆ.
ಹಗಲು, ರಾತ್ರಿ ಮದ್ಯ ಸೇವಿಸುತ್ತಾರೆ
ಇಂದಿರಾ ಕ್ಯಾಂಟೀನ್ 24 ಗಂಟೆಯ ಬಾರ್ ಆಗಿ ಪರಿವರ್ತನೆಯಾಗಿದೆ. ಹಗಲಲ್ಲು ಇಲ್ಲಿ ಕುಡುಕರ ಗುಂಪು ನೆರದಿರುತ್ತದೆ. ರಾತ್ರಿ ಹೊತ್ತಲು ಮದ್ಯ ಸೇವಿಸುತ್ತಿರುತ್ತಾರೆ. ಸಿಗರೇಟು ಹೊಗೆ ಇರುತ್ತೆ. ಗಾಂಜಾ ಸೇದುತ್ತಾರೆ ಅಂತಲು ಕೆಲವರು ಹೇಳುತ್ತಾರೆ ಎಂದು ಸ್ಥಳೀಯರೊಬ್ಬರು ದೂರುತ್ತಾರೆ. ಇಂದಿರಾ ಕ್ಯಾಂಟೀನ್ ಅಕ್ರಮದ ಅಡ್ಡಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ » ತಣ್ಣಗಾಯ್ತು ಶಿವಮೊಗ್ಗ ಈದ್ಗಾ ಮೈದಾನ ವಿವಾದ, ಪುನಃ ವಾಹನ ಪಾರ್ಕಿಂಗ್‌ಗೆ ಅವಕಾಶ, ಯಾವಾಗ?
ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ (Indira Canteen) ಯೋಜನೆ ಈ ರೀತಿ ದುರ್ಬಳಕೆ ಆಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇನ್ನು, ಈ ಇಂದಿರಾ ಕ್ಯಾಂಟೀನ್ ಅನ್ನು ಶೀಘ್ರ ಉದ್ಘಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200