ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಯುಗಾದಿ, ಮೋದಿ ವಿಚಾರ ಮಂಚ್​​ನಿಂದ ಬೇವು, ಬೆಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

169156601 1095982247548351 4823304453913451213 n.jpg? nc cat=109&ccb=1 3& nc sid=8bfeb9& nc ohc=lzqbq8nu4bMAX8m5ozk& nc ht=scontent.fblr20 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021

ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿತು. ಕೈದಿಗಳಿಗೆ ಬೇವು, ಬೆಲ್ಲ ವಿತರಿಸಿ, ಶುಭಾಶಯ ತಿಳಿಸಲಾಯಿತು.

ನಲಿ ನಲಿಯುತ ಯುಗಾದಿ ಆಚರಣೆ

ಕೈದಿಗಳು ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಯುಗಾದಿ ಸಂಬಂಧ ಹಾಡುಗಳನ್ನು ಹೇಳಿ, ಸಂಭ್ರಮಿಸಿದರು. ಬಳಿಕ ನರೇಂದ್ರ ಮೋದಿ ವಿಚಾರ ಮಂಚ್​ನ ವತಿಯಿಂದ ಕೈದಿಗಳಿಗೆ ಬೇವು, ಬೆಲ್ಲ ವಿತರಿಸಲಾಯಿತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಬೇವು, ಬೆಲ್ಲ ಹಂಚಿ ಶುಭಾಶಯ ವಿನಿಮಯ

ಈ ವೇಳೆ ಮಾತನಾಡಿದ ನರೇಂದ್ರ ಮೋದಿ ವಿಚಾರ ಮಂಚ್​ನ ರಾಜಾಧ್ಯಕ್ಷ ಬಳ್ಳೆಕರೆ ಸಂತೋಷ್, ಕೈದಿಗಳು ಕುಟುಂಬದಿಂದ ದೂರಾಗಿ, ಇಲ್ಲಿ ಬಂಧಿಯಾಗಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿ, ಆರೋಪ ಮುಕ್ತರಾಗಲಿ ಎಂದು ಹಾರೈಸುತ್ತ ಬೇವು ಬೆಲ್ಲ ಹಂಚಿದ್ದೇವೆ. ಹೊಸ ವರ್ಷ ಅವರ ಬಾಳಲ್ಲಿ ಹೊಸ ಹುರುಪು ನೀಡಲಿ ಎಂದು ಈ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ನರೇಂದ್ರ ಮೋದಿ ವಿಚಾರ ಮಂಚ್​ನ ಜಿಲ್ಲಾಧ್ಯಕ್ಷ ಶರತ್ ಕಲ್ಯಾಣಿ, ಬಜರಂಗದಳ ಮುಖಂಡ ದೀನದಯಾಳು, ಜೈಲರ್ ಶಿವಾನಂದ ಶಿವಪೂರಿ, ಜೈಲರ್ ಅನಿಲ್, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment