ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಯುಗಾದಿ, ಮೋದಿ ವಿಚಾರ ಮಂಚ್​​ನಿಂದ ಬೇವು, ಬೆಲ್ಲ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021

ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿತು. ಕೈದಿಗಳಿಗೆ ಬೇವು, ಬೆಲ್ಲ ವಿತರಿಸಿ, ಶುಭಾಶಯ ತಿಳಿಸಲಾಯಿತು. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಲಿ ನಲಿಯುತ ಯುಗಾದಿ ಆಚರಣೆ

ಕೈದಿಗಳು ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಯುಗಾದಿ ಸಂಬಂಧ ಹಾಡುಗಳನ್ನು ಹೇಳಿ, ಸಂಭ್ರಮಿಸಿದರು. ಬಳಿಕ ನರೇಂದ್ರ ಮೋದಿ ವಿಚಾರ ಮಂಚ್​ನ ವತಿಯಿಂದ ಕೈದಿಗಳಿಗೆ ಬೇವು, ಬೆಲ್ಲ ವಿತರಿಸಲಾಯಿತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಬೇವು, ಬೆಲ್ಲ ಹಂಚಿ ಶುಭಾಶಯ ವಿನಿಮಯ

ಈ ವೇಳೆ ಮಾತನಾಡಿದ ನರೇಂದ್ರ ಮೋದಿ ವಿಚಾರ ಮಂಚ್​ನ ರಾಜಾಧ್ಯಕ್ಷ ಬಳ್ಳೆಕರೆ ಸಂತೋಷ್, ಕೈದಿಗಳು ಕುಟುಂಬದಿಂದ ದೂರಾಗಿ, ಇಲ್ಲಿ ಬಂಧಿಯಾಗಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ತುಂಬಿ, ಆರೋಪ ಮುಕ್ತರಾಗಲಿ ಎಂದು ಹಾರೈಸುತ್ತ ಬೇವು ಬೆಲ್ಲ ಹಂಚಿದ್ದೇವೆ. ಹೊಸ ವರ್ಷ ಅವರ ಬಾಳಲ್ಲಿ ಹೊಸ ಹುರುಪು ನೀಡಲಿ ಎಂದು ಈ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ನರೇಂದ್ರ ಮೋದಿ ವಿಚಾರ ಮಂಚ್​ನ ಜಿಲ್ಲಾಧ್ಯಕ್ಷ ಶರತ್ ಕಲ್ಯಾಣಿ, ಬಜರಂಗದಳ ಮುಖಂಡ ದೀನದಯಾಳು, ಜೈಲರ್ ಶಿವಾನಂದ ಶಿವಪೂರಿ, ಜೈಲರ್ ಅನಿಲ್, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

Leave a Comment