ಕಾರು ಗಾಜು ಪುಡಿ ಪುಡಿ ಮಾಡುವ ಸಿಸಿಟಿವಿ ವಿಡಿಯೋ ವೈರಲ್, ಇಬ್ಬರು ದುಷ್ಕರ್ಮಿಗಳು ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MAY 2021 ➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡವೆ ಆರೋಪಿಗಳ ಕುಕೃತ್ಯ ಹಲವು ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | ‘ಇದು ಮುಸ್ಲಿಂ ಗೂಂಡಾಗಳ ಕೃತ್ಯ, ಅಶಾಂತಿ ಉಂಟು ಮಾಡುವುದೆ ಇವರ ಧ್ಯೇಯ’, ಗಂಭೀರ ಆರೋಪ

ಭರ್ಮಪ್ಪ ನಗರ, ಸಿದ್ದಯ್ಯ ರಸ್ತೆಗಳಲ್ಲಿ ಮನೆ ಮುಂದೆ ನಿಲ್ಲಿಸಿದ್ದ 12 ಕಾರು, 1 ಆಟೋ, ಐದು ದ್ವಿಚಕ್ರ ವಾಹನಗಳ ಹಾನಿ ಮಾಡಲಾಗಿತ್ತು. ಈ ಸಂಬಂಧ ಶಿವಮೊಗ್ಗದ ಕೆ.ಆರ್.ಪುರಂನ ಶಾಹಿಲ್ ಖಾನ್ (21), ಭರ್ಮಪ್ಪನಗರದ ಮನ್ಸೂರ್ ಅಹಮದ್ (32) ಎಂಬುವವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ | ಶಿವಮೊಗ್ಗ ಗಾಂಧಿ ಬಜಾರ್ ಸುತ್ತಮುತ್ತ ಮನೆ ಮುಂದೆ ನಿಲ್ಲಿಸಿದ್ದ ಸಾಲು ಸಾಲು ಕಾರುಗಳ ಗ್ಲಾಸ್ ಪೀಸ್ ಪೀಸ್

ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಆರು ಪ್ರಕರಣ, ಕೋಟೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಸಿಸಿಟಿವಿಯಲ್ಲಿ ಕುಕೃತ್ಯ ಸೆರೆ

ಈ ದುಷ್ಕರ್ಮಿಗಳ ಕುಕೃತ್ಯ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರೊಂದರ ಗಾಜು ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ವೈರಲ್ ವರೈಲ್ ಆಗಿದೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌