ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳನ್ನು ಬಿಚ್ಚಿಕೊಂಡು ಕದ್ದೊಯ್ಯಲಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಇರುವ ವಿದ್ಯಾಸಾಗರ ಲೇಔಟ್ನಲ್ಲಿ ಘಟನೆ ಸಂಭವಿಸಿದೆ. ಚೇತನ್ ಕುಮಾರ್ ಎಂಬುವವರಿಗೆ ಸೇರಿದ ಕಾರಿನ ಚಕ್ರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಜೂನ್ 9ರಂದು ರಾತ್ರಿ ಚೇತನ್ ಅವರು ಮನೆ ಬಳಿ ಇದ್ದ ಕಾರನ್ನು ನೋಡಿ ಮಲಗಿದ್ದಾರೆ. ಆದರೆ ಬೆಳಗೆದ್ದು ಗಮನಿಸಿದಾಗ ಕಾರಿನ ನಾಲ್ಕು ಚಕ್ರಗಳು ಕಣ್ಮರೆಯಾಗಿದ್ದವು. ಕಳ್ಳರು ನಾಲ್ಕು ಚಕ್ರಗಳನ್ನು ಕದ್ದೊಯ್ದಿದ್ದಾರೆ. ಮ್ಯಾಗ್ ವೀಲ್ ಮತ್ತು ಟೈರ್ನ ಬೆಲೆ ಸುಮಾರು 1.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.