ಶಿವಮೊಗ್ಗ ಲೈವ್.ಕಾಂ | ANAVATTI NEWS | 14 JUNE 2021
ದೇವಸ್ಥಾನದ ಹುಂಡಿ ಒಡೆದ ಕಳ್ಳರು ನೋಟುಗಳನ್ನಷ್ಟೆ ಕದ್ದೊಯ್ದಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆ ಮಾರ್ಕೆಟ್ ಸರ್ಕಲ್ ಬಳಿ ಇರುವ ಬಾನಿ ಚೌಡೇಶ್ವರಿ ದೇವಸ್ಥಾನದಲ್ಲಿ ಕಳ್ಳರು ಹುಂಡಿ ಒಡೆದಿದ್ದಾರೆ. ಚಿಲ್ಲರೆ ಹಣವನ್ನು ಬಿಟ್ಟು ನೋಟುಗಳನ್ನು ಮಾತ್ರ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಕಳ್ಳತನಕ್ಕೆ ಬ್ರೇಕ್ ಹಾಕಲು ಈ ಭಾಗದಲ್ಲಿ ಸಿಸಿಟಿವಿಯನ್ನು ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.