ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳು ರಾತ್ರೋರಾತ್ರಿ ಮಾಯ

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 14 ಜೂನ್ 2021

ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳನ್ನು ಬಿಚ್ಚಿಕೊಂಡು ಕದ್ದೊಯ್ಯಲಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದ ಬೈಪಾಸ್‍ ರಸ್ತೆಗೆ ಹೊಂದಿಕೊಂಡಂತೆ ಇರುವ ವಿದ್ಯಾಸಾಗರ ಲೇಔಟ್‍ನಲ್ಲಿ ಘಟನೆ ಸಂಭವಿಸಿದೆ. ಚೇತನ್ ಕುಮಾರ್‍ ಎಂಬುವವರಿಗೆ ಸೇರಿದ ಕಾರಿನ ಚಕ್ರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಜೂನ್  9ರಂದು ರಾತ್ರಿ ಚೇತನ್ ಅವರು ಮನೆ ಬಳಿ ಇದ್ದ ಕಾರನ್ನು ನೋಡಿ ಮಲಗಿದ್ದಾರೆ. ಆದರೆ ಬೆಳಗೆದ್ದು ಗಮನಿಸಿದಾಗ ಕಾರಿನ ನಾಲ್ಕು ಚಕ್ರಗಳು ಕಣ್ಮರೆಯಾಗಿದ್ದವು. ಕಳ್ಳರು ನಾಲ್ಕು ಚಕ್ರಗಳನ್ನು ಕದ್ದೊಯ್ದಿದ್ದಾರೆ. ಮ್ಯಾಗ್‍ ವೀಲ್ ‍ಮತ್ತು ಟೈರ್‍ನ ಬೆಲೆ ಸುಮಾರು 1.10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment