ಕರೋನ ಪರಿಣಾಮ, ಶಿವಮೊಗ್ಗದ ಆರು ರೈಲುಗಳ ಸಂಚಾರ ರದ್ದು, ಯಾವ್ಯಾವ ರೈಲು ಯಾವಾಗ ರದ್ದಾಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 21 ಮಾರ್ಚ್ 2020

ಕರೋನ ಹಿನ್ನೆಲೆ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಆರು ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಲ್ಲಿ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಯಾವ್ಯಾವ ರೈಲು ಸಂಚಾರ ರದ್ದಾಗಿದೆ?

ಶಿವಮೊಗ್ಗ ಟೌನ್ – ಬೆಂಗಳೂರು ಪ್ಯಾಸೆಂಜರ್ ರೈಲು (56228) ಮತ್ತು ಬೆಂಗಳೂರು – ಶಿವಮೊಗ್ಗ ಟೌನ್ (56227) ರೈಲು ಸಂಚಾರವನ್ನು ಮಾರ್ಚ್ 21 ರಿಂದ ಮಾರ್ಚ್ 31ರವರೆಗೆ ರದ್ದುಗೊಳಿಸಲಾಗಿದೆ.

ವಾರಕ್ಕೆರಡು ಬಾರಿ ಶಿವಮೊಗ್ಗದಿಂದ ಚೆನ್ನೈ ಸೆಂಟ್ರಲ್ ನಡುವೆ ಸಂಚರಿಸುವ ಎಕ್ಸ್’ಪ್ರೆಸ್ ರೈಲು (06221/06222) ಮಾರ್ಚ್ 26ರವರೆಗೆ ರದ್ದುಪಡಿಸಲಾಗಿದೆ.

ಶಿವಮೊಗ್ಗದಿಂದ ರೇಣಿಗುಂಟಾ ಎಕ್ಸ್’ಪ್ರೆಸ್ (ತಿರುಪತಿಗೆ ತೆರಳುವ ರೈಲು) (06223/06224) ರೈಲನ್ನು ಮಾರ್ಚ್ 26ರವರೆಗೆ ರದ್ದುಗೊಳಿಸಲಾಗಿದೆ.

ಶಿವಮೊಗ್ಗದಿಂದ ಯಶವಂತಪುರ ನಡುವಿನ ರೈಲು (06539/06540) ಮಾರ್ಚ್ 24, 25,26, 27 ಮತ್ತು 31ರಂದು ರದ್ದುಗೊಳಿಸಲಾಗಿದೆ.

ಯಶವಂತಪುರ – ಶಿವಮೊಗ್ಗ ಎಕ್ಸ್’ಪ್ರೆಸ್ ರೈಲು (16581) ಮಾರ್ಚ್.23 ರಿಂದ 25ರವರೆಗೆ ರದ್ದುಗೊಳಿಸಲಾಗಿದೆ.

ಶಿವಮೊಗ್ಗ ಟೌನ್ – ಯಶವಂತಪುರ ಎಕ್ಸ್’ಪ್ರೆಸ್ ರೈಲು (16582) ಮಾ..24ರಿಂದ 26ರವರೆಗೆ ರದ್ದುಗೊಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Corona Effect | Six Trians which commute between shimoga  Bangalore, Shimoga yeshwanthapura, Shimoga Chennai, Shimoga Renigunta (Tirupati) cancelled.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 21, 2020

Leave a Comment