ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 17 ಏಪ್ರಿಲ್ 2020
ಖಾಲಿ ರಸ್ತೆಯಲ್ಲಿ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಬ್ಬ ಸಬ್ ಇನ್ಸ್‍ಪೆಕ್ಟರ್ ಮತ್ತು ಇಬ್ಬರು ಪಿಎಸ್‍ಐಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಕ್‍ಡೌನ್ ಹಿನ್ನೆಲೆ ಸಹ್ಯಾದ್ರಿ ಕಾಲೇಜು ಬಳಿ ವಿದ್ಯಾನಗರ ಟ್ರಾಫಿಕ್ ಠಾಣೆ ಮುಂಭಾಗ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ರಾತ್ರಿ ಈ ಬ್ಯಾರಿಕೇಡ್ ಬಳಿಗೆ ಬಂದ ಲಾರಿ ವೇಗ ತಗ್ಗದೆ ಬ್ಯಾರಿಕೇಡ್‍ಗೆ ಗುದ್ದಿದೆ.
ಡಿಕ್ಕಿ ಬಳಿಕ ಪರಾರಿಗೆ ಯತ್ನ
ವೇಗವಾಗಿ ಬರುತ್ತಿದ್ದ ಲಾರಿಯನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ವೇಗ ತಗ್ಗಿಸದ ಚಾಲಕ ಬ್ಯಾರಿಕೇಡ್‍ಗೆ ಗುದ್ದಿದ್ದಾನೆ. ಕೂದಲೆಳೆ ಅಂತರದಲ್ಲಿ ಮೂವರು ಪೊಲೀಸರು ತಪ್ಪಿಸಿಕೊಂಡಿದ್ದಾರೆ. ಘಟನೆ ಬಳಿಕವು ಚಾಲಕ ಲಾರಿಯನ್ನು ನಿಲ್ಲಿಸದೆ ಹೋಗಿದ್ದಾನೆ.
ಚೇಸ್ ಮಾಡಿದ ಪೊಲೀಸರು
ವೇಗವಾಗಿ ಮುಂದೆ ಸಾಗಿದ ಲಾರಿಯನ್ನು ಪೊಲೀಸರು ಜೀಪ್‍ನಲ್ಲಿ ಚೇಸ್ ಮಾಡಿದ್ದಾರೆ. ತುಂಗಾ ನದಿ ಸೇತುವೆ ದಾಟಿದ ಬಳಿಕ ಲಾರಿಯನ್ನು ತಡೆದಿದ್ದಾರೆ. ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರವಿದ್ದರು. ಪೊಲೀಸ್ ಬ್ಯಾರಿಕೇಡ್‍ಗಳಿಗೆ ಡಿಕ್ಕಿ ಹೊಡೆದು, ಲಾರಿಯನ್ನು ವೇಗವಾಗಿ ನುಗ್ಗಿಸಿಕೊಂಡು ಬರಲು ಕಾರಣವೇನು ಅನ್ನುವುದು ತಿಳಿದು ಬಂದಿಲ್ಲ. ಸದ್ಯ ಲಾರಿಯನ್ನು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]