ಕರೋನ ಟೆಸ್ಟಿಂಗ್, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೇಗೆ ನಡೆಯುತ್ತೆ ಪರೀಕ್ಷೆ? ಏನೆಲ್ಲ ಮಾಹಿತಿ ನೀಡಬೇಕು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 1 ಮೇ 2020

ಕರೋನ ಸೋಂಕು ಪತ್ತೆಗೆ ಶಿವಮೊಗ್ಗದಲ್ಲಿ ರಾಪಿಡ್ ಟೆಸ್ಟ್‌ಗಳನ್ನು ಕೈಗೊಳ್ಳಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಯಾರಿಗೆಲ್ಲ ಟೆಸ್ಟ್‌  ನಡೆಸಲಾಗುತ್ತಿದೆ? ಟೆಸ್ಟಿಂಗ್ ಹೇಗೆ ನಡೆಯುತ್ತಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಯಾರಿಗೆಲ್ಲ ಟೆಸ್ಟ್ ಮಾಡಲಾಗುತ್ತಿದೆ?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ದೇಶಿತ ಕಟ್ಟಡದಲ್ಲಿ ಕರೋನ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿಗೆ ಬರುವವರು ಮೊದಲು ತಮ್ಮ ಮಾಹಿತಿ ನೀಡಬೇಕು, ಪ್ರವಾಸದ ವಿವರ ಇದ್ದರೆ ತಿಳಿಸಬೇಕು, ಆರೋಗ್ಯ ವಿವರವನ್ನು ಒದಗಿಸಬೇಕು.

95650537 1110396012655151 6879106890161192960 n.jpg? nc cat=107& nc sid=8024bb& nc ohc=FTJNJY0TLgUAX88z6LL& nc ht=scontent.fblr1 3
ಮೆಗ್ಗಾನ್‌ ಆಸ್ಪತ್ರೆಯ ಐಸೊಲೇಷನ್‌ ವಾರ್ಡ್‌

ಆಫ್‍ಲೈನ್, ಆನ್‍ಲೈನ್ ಮಾಹಿತಿ

ಮಾಹಿತಿಯನ್ನು ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಅಪ್‍ಡೇಟ್ ಮಾಡಿಕೊಳ್ಳಲಾಗುತ್ತದೆ. ಶಂಕಿತ ಅಥವಾ ಸೋಂಕಿತ ವ್ಯಕ್ತಿ ನೀಡುವ ಮಾಹಿತಿ ಆಧಾರದ ಮೇಲೆ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿಯೇ ಮಾಹಿತಿಗಳನ್ನುಆಫ್‍ಲೈನ್ ಮತ್ತು ಆನ್‍ಲೈನ್ ಅಪ್‍ಲೋಡ್ ಮಾಡಿಕೊಳ್ಳುತ್ತಾರೆ.

95664502 1110396052655147 1844089791025512448 n.jpg? nc cat=109& nc sid=8024bb& nc ohc=76rrHIGe1ZUAX8t2nww& nc ht=scontent.fblr1 3
ಆಫ್‌ಲೈನ್‌ ಮತ್ತು ಆನ್‌ಲೈನ್‌ ಮಾಹಿತಿ ಸಂಗ್ರಹ (ಪತ್ರಕರ್ತರನ್ನು ಪರೀಕ್ಷೆಗೆ ಒಳಪಡಿಸಿದಾಗಿನ ಚಿತ್ರ)

ಆಫ್‍ಲೈನ್ ಅಂದರೆ ವೈದ್ಯಕೀಯ ಸಿಬ್ಬಂದಿಯೇ ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಕೊಳ್ಳುತ್ತಾರೆ. ಆನ್‍ಲೈನ್ ಎಂದರೆ ಮೊಬೈಲ್‍ ಮೂಲಕ ಮಾಹಿತಿ ಅಪ್‍ಡೇಟ್ ಮಾಡಿಕೊಳ್ಳಲಾಗುತ್ತದೆ.

95099515 1110396115988474 8806983470132756480 n.jpg? nc cat=104& nc sid=8024bb& nc ohc=Xj7ONmQo7goAX AgzvT& nc ht=scontent.fblr1 4
ಕರೋನ ಪರೀಕ್ಷೆಗೆ ಸ್ವ್ಯಾಬ್‌ ಕಿಟ್‌ಗಳು

ಟೆಸ್ಟಿಂಗ್ ಹೇಗೆ ನಡೆಯಲಿದೆ?

ಪಿಪಿಇ ಧರಿಸಿಕೊಂಡು ಸಂಪೂರ್ಣವಾಗಿ ದೇಹವನ್ನು ಕವರ್ ಮಾಡಿಕೊಂಡಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಇರಲಿದ್ದಾರೆ. ಇವರು ನಿಯಮಿತವಾಗಿ ಒಬ್ಬೊಬ್ಬರನ್ನೇ ಪರೀಕ್ಷೆಗೆ ಒಳಪಡಿಸುತ್ತಾರೆ. ವ್ಯಕ್ತಿಯ ಮೂಗಿನ ಮೂಲಕ ಸ್ವ್ಯಾಬ್ ಒಳಗೆ ಹಾಕಲಾಗುತ್ತದೆ. ಇಲ್ಲಿಂದ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿತ್ತದೆ.

95274363 1110396242655128 2850159487539478528 n.jpg? nc cat=106& nc sid=8024bb& nc ohc=HKPDQPiKQPoAX cihNe& nc ht=scontent.fblr1 3
ಕರೋನ ಸ್ವ್ಯಾಬ್‌ ಸಂಗ್ರಹ ಪರೀಕ್ಷೆ (ಪತ್ರಕರ್ತರನ್ನು ಪರೀಕ್ಷೆಗೆ ಒಳಪಡಿಸಿದಾಗಿನ ಫೋಟೊ)

ರಿಪೋರ್ಟ್ ಯಾವಾಗ ಸಿಗಲಿದೆ?

ಗಂಟಲು ದ್ರವ ಸಂಗ್ರಹಿಸಿದ ಸ್ವ್ಯಾಬನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶಿವಮೊಗ್ಗ ವೈರಾಣು ಸಂಶೋಧನೆ ಮತ್ತು ರೋಗ ಪರೀಕ್ಷೆ ಪ್ರಯೋಗಾಲಯ (VRDL) ಲ್ಯಾಬ್‍ಗೆ ಸ್ವ್ಯಾಬ್ ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಪರೀಕ್ಷೆ ಬಳಿಕ ವರದಿ ಪ್ರಕಟಗೊಳ್ಳಲಿದೆ.

95262062 1110396392655113 2063963464853880832 n.jpg? nc cat=104& nc sid=8024bb& nc ohc=JM3iprwfskgAX 0BPnh& nc ht=scontent.fblr1 4
ಲ್ಯಾಬ್‌ಗೆ ಕಳುಹಿಸಲು ಸಿದ್ಧವಾಗಿರುವ ಸ್ವ್ಯಾಬ್

ವರದಿ ತಲುಪುವುದು ಹೇಗೆ?

ಪರೀಕ್ಷೆಗೆ ಒಳಪಡುವಾಗ ವ್ಯಕ್ತಿಯ ಮೊಬೈಲ್‍ ನಂಬರ್ ಪಡೆಯಲಾಗುತ್ತದೆ. ಆನ್‍ಲೈನ್ ಮೂಲಕ ಈ ನಂಬರ್‌ಗೆ ಕರೋನ ಪರೀಕ್ಷೆಯ ರಿಪೋರ್ಟ್ ಬರಲಿದೆ. ನೆಗಟಿವ್ ವರದಿ ಬಂದರೆ ಎಂದಿನಂತೆ ಇರಬಹುದು. ಒಂದು ವೇಳೆ ಪಾಸಿಟಿವ್ ವರದಿ ಬಂದರೆ, ವೈದ್ಯರ ಸೂಚನೆಯಂತೆ ಕ್ವಾರಂಟೈನ್‍ಗೆ ಒಳಗಾಗಬೇಕಾಗುತ್ತದೆ.

94889345 1110396515988434 9088462230709600256 n.jpg? nc cat=101& nc sid=8024bb& nc ohc=1kNzjSZeEH8AX jd6Td& nc ht=scontent.fblr1 4
ಪಿಪಿಇ ಕಿಟ್‌ ಧರಿಸಿಕೊಂಡು ಪರೀಕ್ಷೆಗೆ ಸಿದ್ಧವಾಗಿರುವ ವೈದ್ಯರು

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಏಪ್ರಿಲ್ 30ರವರೆಗೆ 1418 ಮಂದಿಯನ್ನು ಕರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 1302 ಮಂದಿಯ ವರದಿ ಪ್ರಕಟವಾಗಿದ್ದು, ನೆಗೆಟಿವ್ ಬಂದಿದೆ.  

95132241 857973851349193 1704349070090305536 n.jpg? nc cat=109& nc sid=dd9801& nc ohc=P I5w 5gfgcAX 79J3x& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 1, 2020

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

ಸೋಮಿನಕೊಪ್ಪದಲ್ಲಿ ಜಾನಪದ ಸಮ್ಮೇಳನ, ಅಹೋರಾತ್ರಿ ಕಾರ್ಯಕ್ರಮ, ಏನೇನೆಲ್ಲ ಇರಲಿದೆ?

Leave a Comment