ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 6 ಮೇ 2020
ಲಾಕ್‍ಡೌನ್ ಸಡಿಲಗೊಳ್ಳುತ್ತಿದ್ದಂತೆ ಶಿವಮೊಗ್ಗದಲ್ಲಿ ಮತ್ತೆ ಲಾಂಗು, ಮಚ್ಚುಗಳು ಸದ್ದು ಮಾಡಲು ಅರಂಭಸಿವೆ. ಶಿವಮೊಗ್ಗದಲ್ಲಿ ಯುವಕನೊಬ್ಬನ ಹತ್ಯೆಗೆ ಯತ್ನ ನಡೆದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮನೋಜ್ ಶೆಟ್ಟ (32) ಎಂಬಾತನ ಮೇಲೆ ಭಾರತಿ ಕಾಲೋನಿಯಲ್ಲಿ ಐವರ ಗುಂಪು ದಾಳಿ ನಡೆಸಿದೆ. ಆತನ ಹತ್ಯೆಗೆ ಯತ್ನಿಸಲಾಗಿದೆ. ಅದೃಷ್ಟವಶಾತ್ ಮನೋಜ್ ಶೆಟ್ಟಿ ಬಚಾವಾಗಿದ್ದಾನೆ. ಆದರೆ ತೀವ್ರ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲು ಮಾಡಾಗಿದೆ.
ಹತ್ಯೆಗೆ ಯತ್ನಿಸಿದ್ದು ಯಾರು? ಕಾರಣವೇನು?
ಪೊಲೀಸ್ ಮಾಹಿತಿ ಪ್ರಕಾರ, ಹಣಕಾಸು ವ್ಯವಹಾರ ಸಂಬಂಧ ಮನೋಜ್ ಶೆಟ್ಟಿ ಮೇಲೆ ಹಲ್ಲೆ ನಡೆದಿದೆ. ಭಾರತಿ ಕಾಲೋನಿಯ ಐವರು ಈ ದುಷ್ಕೃತ್ಯ ಎಸಗಿದ್ದಾರೆ. ಹಣಕಾಸು ವ್ಯವಹಾರ ಸಂಬಂಧ ಅದೇ ಏರಿಯಾದ ಇಬ್ಬರೊಂದಿಗೆ ಮನೋಜ್ ಶೆಟ್ಟಿಗೆ ಜಗಳವಾಗಿತ್ತು. ಈ ಸಂಬಂಧ ಮಂಗಳವಾರ ರಾತ್ರಿ ಮನೋಜ್ ಶೆಟ್ಟಿಯನ್ನು ಮಾತುಕತೆಗೆ ಕರೆದು ಹತ್ಯೆಗೆ ಯತ್ನಿಸಲಾಗಿದೆ.
ಕುತ್ತಿಗೆ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆ ಮಧ್ಯೆ ಬಿದ್ದಿದ್ದ ಮನೋಜ್ ಶೆಟ್ಟಿಯನ್ನು ಜನರೆ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]