ಶಿವಮೊಗ್ಗ ಎಸ್‌ಪಿ ಕಚೇರಿ ಸೀಲ್ ಡೌನ್ ವರದಿಯೇ ಸುಳ್ಳು, ನೂತನ ಎಸ್‌ಪಿ ಅಧಿಕಾರ ಸ್ವೀಕಾರ ಅನ್ನೋದು ನಿರಾಧಾರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 20 ಮೇ 2020

ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎಸ್‍.ಪಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಮೂರು ಮಂದಿ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿದ್ದಾರೆ. ಇನ್ನುಳಿದಂತೆ ಯಾವುದೇ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿರುವುದಿಲ್ಲ. ಆದರೆ ಮುಂಜಾಗರೂಕತಾ ಕ್ರಮವಾಗಿ ಈಗಾಗಲೇ 11 ಮಂದಿ ಪೊಲೀಸ್ ಅಧಿಕಾರಿಗಳ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.

ವಿಶೇಷ ಸಂದರ್ಭ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ವಿಶೇಷ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಕರ್ತವ್ಯಕ್ಕಾಗಿ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಾಮಾನ್ಯವಾಗಿದೆ. ಆದರೂ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಹೊರ ಜಿಲ್ಲೆಯ ಅಧಿಕಾರಿಗಳು ಹೆಚ್ವುವರಿ ಕರ್ತವ್ಯ ವಹಿಸಿಕೊಂಡಿಲ್ಲ. ಇನ್ನು ಜಿಲ್ಲಾ ರಕ್ಷಣಾಧಿಕಾರಿ ಅವರು ವರ್ಗಾವಣೆಯಾಗಿರುವ ವರದಿಯು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲಾ ಸರ್ಕಾರಿ ಕಚೇರಿಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸ್ಪಷ್ಟನೆಗೆ ಕಾರಣವೇನು?

ಬೆಳಗ್ಗೆಯಿಂದ ಕೆಲವು ಮಾಧ್ಯಮಗಳಲ್ಲಿ ಜಿಲ್ಲಾ ರಕ್ಷಾಣಧಿಕಾರಿ ಕಚೇರಿಯನ್ನು ಸೀಲ್‍ ಡೌನ್ ಮಾಡಲಾಗಿದೆ ಎಂದು ವರದಿ ಪ್ರಕಟಿಸಲಾಗಿತ್ತು. ಇದರಿಂದ ಜನರು ಆತಂಕಕ್ಕೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಅವರು ಯಾವುದೆ ಸರ್ಕಾರಿ ಕಚೇರಿಯನ್ನು ಸೀಲ್ ಡೌನ್ ಮಾಡಿಲ್ಲ ಎಂದು ತಿಳಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 20, 2020

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment