ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020
ರಾಕ್ಷಸರ ಹತ್ತಿರ ಕರೋನಾ ಬರುವುದಿಲ್ಲ. ನಿಮಗೇನು ಕರೋನಾ ಬಂದಿದೆಯೇ? ನನಗಂತೂ ಕರೋನಾ ಬಂದಿಲ್ಲ. ಹೀಗೆಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪ, ಕರೋನಾ ಬರುತ್ತದೆ ಎಂದು ಹೆಣ ಬಿದ್ದಂತೆ ಮನೆಯಲ್ಲಿ ಬಿದ್ದುಕೊಂಡರೆ ಹೇಗೆ. ಕರೋನಾ ಎದುರಿಸುತ್ತೇವೆ ಎಂಬ ಆತ್ಮಸ್ಥೈರ್ಯ ಇರಬೇಕು. ಕರೋನಾ ಬರುತ್ತದೆ ಎಂದು ಹೆದರಿಕೊಂಡು ಶಾಸಕರು, ಸಚಿವರು ಸಂಸದರು ಮನೆಯಲ್ಲೇ ಉಳಿದುಕೊಂಡರೆ ಅಭಿವೃದ್ಧಿ ಕಾರ್ಯಗಳ ಗತಿಯೇನು? ತಲೆ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳುವುದಲ್ಲ ಎಂದರು.
ಕರೊನಾ ಎದುರಿಸುವ ಆತ್ಮಸ್ಥೈರ್ಯ ಇರಬೇಕು ಜೊತೆಗೆ ಜಾಗೃತಿಯನ್ನೂ ವಹಿಸಬೇಕು ಎಂದು ಈಶ್ವರಪ್ಪ ವಿವರಣೆ ನೀಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]