ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಮೇ 2020
ಸಂಬಂಧಿಯೊಬ್ಬರ ಸಾವಿನ ಹಿನ್ನೆಲೆ ತಮಿಳುನಾಡಿನಿಂದ ಭದ್ರಾವತಿ ತಾಲೂಕಿನ ಗ್ರಾಮವೊಂದಕ್ಕೆ ಬಂದಿರುವ ಎಂಟು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.
ಎಲ್ಲಿಗೆ ಬಂದಿದ್ದರು?
ಭದ್ರಾವತಿ ತಾಲೂಕಿನ ಭೂತನಗುಡಿ ಗ್ರಾಮದಲ್ಲಿ ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆ, ಎಂಟು ಮಂದಿ ತಮಿಳುನಾಡಿನಿಂದ ಆಗಮಿಸಿದ್ದರು. ಇವರ ಬಳಿ ಅಧಿಕೃತ ಪಾಸ್ ಇದೆ ಎನ್ನಲಾಗುತ್ತಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ತಾಲೂಕಿನ ಕ್ವಾರಂಟೈನ್ ಸೆಂಟರ್ ಒಂದರಲ್ಲಿ ಇರಿಸಲಾಗಿದೆ.
ರಿಪೋರ್ಟ್ ಬಳಿಕ ನಿರ್ಧಾರ
ಎಂಟು ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಇದರ ರಿಪೋರ್ಟ್ ಬರುವವರೆಗೂ ಇವರನ್ನು ತಮಿಳುನಾಡಿಗೆ ಹಿಂತಿರುಗಲು ಅವಕಾಶ ಕೊಡುವುದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು
















