ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜೂನ್ 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಲಂಬಾಣಿ, ಭೋವಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಯಿಂದ ಕೈಬಿಡುವಂತೆ ಸುಪ್ರೀಂ ಕೊರ್ಟ್ ಆದೇಶ ನೀಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪತ್ರ ಚಳವಳಿ ನಡೆಸಲಾಯಿತು.
ಏನಿದು ಪತ್ರ ಚಳವಳಿ?
ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ಸಮುದಾಯ ಒತ್ತಾಯಿಸಿದೆ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಮತ್ತು ತಾಂಡಗಳಲ್ಲಿ ಇರುವ ಬಂಜಾರ ಸಮುದಾಯದವರು ಪತ್ರ ಬರೆದಿದ್ದು, ಕಠಿಣ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ.
ಎಂಎಲ್‍ಎ ನೇತೃತ್ವದಲ್ಲಿ ಮೆರವಣಿಗೆ
ಶಾಸಕ ಅಶೋಕ್ ನಾಯ್ಕ್ ನೇತೃತ್ವದಲ್ಲಿ ಎಂಎಲ್‍ಎ ಕಚೇರಿಯಿಂದ ಮೆರವಣಿಗೆ ನಡೆಸಿದ ಬಂಜಾರ ಸಮುದಾಯದ ಪ್ರಮುಖರು, ಗೋಪಿ ಸರ್ಕಲ್ ಬಳಿ ಇರುವ ಅಂಚೆ ಇಲಾಖೆಯಲ್ಲಿ ಪತ್ರ ಚಳವಳಿ ನಡೆಸಿದರು.

ಮತ್ತೊಂದೆಡೆ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ನೇತೃತ್ವದಲ್ಲೂ ಪತ್ರ ಚಳವಳಿ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಪ್ರಮುಖರು ಒತ್ತಾಯಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






