ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಂದು ಕರೋನ ಪಾಸಿಟಿವ್, ಹಳ್ಳಿ ಸೀಲ್ ಡೌನ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಜೂನ್ 2020

Thirthahalli Taluk News

ತೀರ್ಥಹಳ್ಳಿ ತಾಲೂಕಿನಲ್ಲಿ ಮೂರನೇ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮತ್ತೊಂದು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ನಾಲ್ಕು ದಿನದ ಹಿಂದೆ ಊರಿಗೆ ಮರಳಿದ್ದರು. ಕಫ ಮತ್ತು ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆ, ಚಿಕಿತ್ಸೆಗಾಗಿ ಯುವತಿ ಜೆ.ಸಿ.ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು.

ಕರೋನ ಪಾಸಿಟಿವ್, ಶುರುವಾಯ್ತು ಭೀತಿ

ಪರೀಕ್ಷೆ ಬಳಿಕ ಯುವತಿಯಲ್ಲಿ ಕರೋನ ಪಾಸಿಟಿವ್ ಬಂದಿದೆ. ಇದು ತಾಲೂಕಿನಲ್ಲಿ ಪುನಃ ಆತಂಕ ಸೃಷ್ಟಿಸಿದೆ. ಯುವತಿಯ ಮನೆಯಲ್ಲಿ ತಂದೆ, ತಾಯಿಯಷ್ಟೇ ಇದ್ದಾರೆ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯುವತಿಯ ಊರಿದ್ದು, ಅದನ್ನು ಸೀಲ್‍ ಡೌನ್ ಮಾಡಲಾಗಿದೆ. ಆರು ಮನೆಗಳು ಈ ಗ್ರಾಮದಲ್ಲಿವೆ. ಯಾರೂ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ.

ದೇವರ ಹರಕೆ ದಿನವೇ ಕ್ವಾರಂಟೈನ್

ಯುವತಿ ಮನೆಯಲ್ಲಿ ಭಾನುವಾರ ದೇವರ ಹರಕೆಯಿತ್ತು ಎಂದು ತಿಳಿದು ಬಂದಿದೆ. ಅದೇ ದಿನ ಕರೋನ ಪಾಸಟಿವ್ ಬಂದಿದ್ದು, ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು, ದೇವರ ಹರಕೆಗೆ ನೆಂಟರು, ಇಷ್ಟರನ್ನು ಕರೆಯಲು ಯುವತಿಯ ತಂದೆ ಕೆಲವು ಕಡೆಗೆಲ್ಲ ಹೋಗಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment