ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಚಂದ್ರ ಗ್ರಹಣ (lunar eclipse) ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ವಿವಿಧ ದೇವಸ್ಥಾನಗಳಿಗೆ ದೊಡ್ಡ ಸಂಖ್ಯೆಯ ಭಕ್ತರು ಹರಿದು ಬರುತ್ತಿದ್ದಾರೆ. ಮತ್ತೊಂದೆಡೆ ನಗರದ ವಿವಿಧೆಡೆ ಅಂಗಡಿಗಳು ಬಂದ್ ಆಗಿವೆ. ಜನ ಸಂಚಾರವು ತುಸು ಕಡಿಮೆಯಾಗಿದೆ.
ಚಂದ್ರ ಗ್ರಹಣ ದೇವಸ್ಥಾನಗಳು ಬಂದ್
ಚಂದ್ರ ಗ್ರಹಣ ಹಿನ್ನೆಲೆ ಶಿವಮೊಗ್ಗ ನಗರದ ದೇವಸ್ಥಾನಗಳು ಬಂದ್ ಆಗಿದ್ದವು. ಸಂಜೆ ಗ್ರಹಣ ಮುಗಿಯುವವರೆಗೆ ದೇವಸ್ಥಾನಗಳು ಖಾಲಿಯಾಗಿದ್ದವು. ಗ್ರಹಣದ ಬಳಿಕ ದೇವಸ್ಥಾನಗಳಲ್ಲಿ ಶುಚಿ ಕಾರ್ಯ ನಡೆಸಲಾಯಿತು, ದೇವರ ಮೂರ್ತಿಗಳನ್ನು ಶುದ್ಧಗೊಳಿಸಿ ಪೂಜೆ ನಡೆಸಲಾಯಿತು.
ಇದನ್ನೂ ಓದಿ – ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?
ದೊಡ್ಡ ಸಂಖ್ಯೆಯ ಭಕ್ತರು
ಗ್ರಹಣ ಮುಗಿಯುತ್ತಿದ್ದಂತೆ ಭಕ್ತರು ದೇವಸ್ಥಾನಗಳಿಗೆ ಆಗಮಿಸಿದರು. ಶಿವಮೊಗ್ಗ ನಗರದ ಎಲ್ಲ ಪ್ರಮುಖ ದೇವಸ್ಥಾನಗಳಿಗೆ ಭಕ್ತರಿಂದ ತುಂಬಿತ್ತು. ದುರ್ಗಿಗುಡಿಯ ಶ್ರೀ ದುರ್ಗಮ್ಮ, ಮರಿಯಮ್ಮ ದೇವಸ್ಥಾನದಲ್ಲಿ ಇವತ್ತು ರಥೋತ್ಸವ ಇತ್ತು. ಹಾಗಾಗಿ ಈ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಿತ್ತು.
ಅಂಗಡಿಗಳು ಬಂದ್, ಜನ ಸಂಚಾರ ಕಡಿಮೆ ಗ್ರಹಣದ ಕಾರಣಕ್ಕೆ ಶಿವಮೊಗ್ಗ ನಗರದಲ್ಲಿ ಹಲವು ಅಂಗಡಿಗಳು ಬಂದ್ ಆಗಿದ್ದವು. ತಿಂಡಿ, ತಿನಿಸು ಅಂಗಡಿಗಳು, ರಸ್ತೆ ಬದಿ ವ್ಯಾಪಾರಿಗಳು ಕೂಡ ಇವತ್ತು ವ್ಯಾಪಾರ ಮಾಡಲಿಲ್ಲ. ಇನ್ನು, ಸಿಟಿಯಲ್ಲಿ ಎಂದಿಗಿಂತಲು ವಾಹನ ಮತ್ತು ಜನ ಸಂಚಾರ ಕಡಿಮೆ ಇತ್ತು.

LATEST NEWS
- ಶಿವಮೊಗ್ಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ಮುಂಭಾಗ

- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು





