ಗಾಜನೂರಿನ ತುಂಗಾ ಡ್ಯಾಮ್ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಹರಿಸಲಾಗುತ್ತಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜೂನ್ 2020

ಗಾಜನೂರಿನ ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ಮೇಲೆತ್ತಲಾಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಈ ಮಳೆಗಾಲದಲ್ಲಿ ಗೇಟ್ ತೆಗೆದು ನೀರು ಹೊರ ಹರಿಸುತ್ತಿರುವ ರಾಜ್ಯದ ಮೊದಲ ಡ್ಯಾಂ ಇದು. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಎಷ್ಟು ಗೇಟ್‍ಗಳನ್ನು ಮೇಲೆತ್ತಲಾಗಿದೆ?

180620 Gajanur Tunga Dam Full Four Gates Opened 1

ಇವತ್ತು ಮಧ್ಯಾಹ್ನ ತುಂಗಾ ಜಲಾಶಯದ ನಾಲ್ಕು ಕ್ರಸ್ಟ್‍ ಗೇಟುಗಳನ್ನು ಮೇಲೆತ್ತಲಾಗಿದೆ. ಒಟ್ಟು 6836 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಪೈಕಿ ಕ್ರಸ್ಟ್ ಗೇಟುಗಳ ಮೂಲಕ 2086 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿರುವ 4750 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ವಿಶೇಷ ಪೂಜೆ ಬಳಿಕ ಗೇಟ್ ಓಪನ್

ಗೇಟ್ ಓಪನ್ ಮಾಡುವ ಮೊದಲು ಜಲಾಶಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಒಂದೊಂದೆ ಗೇಟುಗಳನ್ನು ತೆಗೆದು ನೀರು ಹರಿಸಲಾಯಿತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Comment