ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2020
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಒಟ್ಟು 193.00 ಮಿಮಿ ಮಳೆಯಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 120.36 ಮಿಮಿ ಮಳೆ ದಾಖಲಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆ?
ಶಿವಮೊಗ್ಗ 23.20 ಮಿಮಿ., ಭದ್ರಾವತಿ 13.80 ಮಿಮಿ., ತೀರ್ಥಹಳ್ಳಿ 53.20 ಮಿಮಿ., ಸಾಗರ 25.60 ಮಿಮಿ., ಶಿಕಾರಿಪುರ 7.80 ಮಿಮಿ., ಸೊರಬ 7.40 ಮಿಮಿ. ಹಾಗೂ ಹೊಸನಗರ 62.00 ಮಿಮಿ. ಮಳೆಯಾಗಿದೆ.

ಮೈದುಂಬಿದ ತುಂಗೆ
ಹಿನ್ನೀರು ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗದ ಕೋರ್ಪಲಯ್ಯನ ಛತ್ರ ಮಂಟಪದ ಅರ್ಧದಷ್ಟು ಎತ್ತರದವರೆಗೆ ನೀರು ಬಂದಿದೆ.
ಯಾವ್ಯಾವ ಜಲಾಶಯದಲ್ಲಿ ಎಷ್ಟು ನೀರಿದೆ?
ಲಿಂಗನಮಕ್ಕಿ: 1819 (ಗರಿಷ್ಠ), 1758.90 (ಇಂದಿನ ಮಟ್ಟ), 18294.00 (ಒಳಹರಿವು), 3841.50 (ಹೊರಹರಿವು).
ಭದ್ರಾ: 186 (ಗರಿಷ್ಠ), 142.11 (ಇಂದಿನ ಮಟ್ಟ), 8753.00 (ಒಳಹರಿವು), 165.00 (ಹೊರಹರಿವು).
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 16857.00 (ಒಳಹರಿವು), 16857.00 (ಹೊರಹರಿವು).
ಮಾಣಿ: 595 (ಎಂಎಸ್ಎಲ್ಗಳಲ್ಲಿ), 573.00 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2918 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಗಳಲ್ಲಿ).
ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 562.76 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1539 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 569.50 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3153.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 577.54 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1753.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಗಳ).
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






