GOOD NEWS | ಪೊಲೀಸ್ ಠಾಣೆ ಸಿಬ್ಬಂದಿಗೆಲ್ಲ ಕಷಾಯ ಮಾಡಿ ಕೊಡ್ತಿದ್ದಾರೆ ಪಿಎಸ್ಐ, ಶಿವಮೊಗ್ಗದಲ್ಲೊಂದು ಡಿಫರೆಂಟ್ ಪ್ರಯೋಗ

108201177 913463652466879 5491250964400112510 o.jpg? nc cat=100& nc sid=110474& nc ohc=4jItTT6 xksAX98rAT8& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2020

Shivamogga-Live-Number-1-Website

ಕರೋನದಿಂದ ರಕ್ಷಣೆಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ಕಷಾಯ ನೀಡಲಾಗುತ್ತಿದೆ. ಇದರಿಂದ ಪ್ರಭಾವಿತರಾದ ಶಿವಮೊಗ್ಗದ ಸಬ್‍ ಇನ್ಸ್‍ಪೆಕ್ಟರ್‍ ಒಬ್ಬರು, ಮನೆಯಿಂದಲೇ ಕಷಾಯ ಪುಡಿ ಸಿದ್ಧಪಡಿಸಿಕೊಂಡು ಬಂದು ಠಾಣೆಯಲ್ಲಿ ಕಷಾಯ ತಯಾರು ಮಾಡಿ ಸಿಬ್ಬಂದಿಗೆ ಕೊಟ್ಟಿದ್ದಾರೆ.

107095610 909433912869853 8511875037471527700 o.jpg? nc cat=110& nc sid=110474& nc ohc=2c5Rp1JHkF0AX9 TF6R& nc ht=scontent.fblr1 5

ಯಾರದು ಸಬ್‍ ಇನ್ಸ್‍ಪೆಕ್ಟರ್‍?

ಶಿವಮೊಗ್ಗದ ಪೂರ್ವ ಟ್ರಾಫಿಕ್‍ ಪೊಲೀಸ್ ಠಾಣೆಯ ಸಬ್‍ ಇನ್ಸ್‍ಪೆಕ್ಟರ್‍ ಭಾರತಿ ಅವರು ಸಿಬ್ಬಂದಿಗೆ ಕಷಾಯ ಸಿದ್ಧಪಡಿಸಿ ನೀಡಿದ್ದಾರೆ. ಇವತ್ತು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಕಷಾಯ ನೀಡಿದ್ದಾರೆ.

ಕಷಾಯದ ವಿಡಿಯೋ ವೈರಲ್

ಸಬ್‍ ಇನ್ಸ್‍ಪೆಕ್ಟರ್‍ ಭಾರತಿ ಅವರು ಟ್ರಾಫಿಕ್‍ ಸಿಬ್ಬಂದಿಗಳಿಗೆ ಕಷಾಯ ನೀಡುತ್ತಿರುವ ವಿಡಿಯೋ ವೈರಲ್‍ ಆಗಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸಬ್‍ ಇನ್ಸ್‍ಪೆಕ್ಟರ್ ಭಾರತಿ ಅವರು, ನಮ್ಮ ಅತ್ತೆ, ಮಾವ ಕೇರಳದವರು. ಅವರಿಗೆ ಆಯುರ್ವೇದದತ್ತ ಒಲವು ಹೆಚ್ಚು. ಪ್ರತಿದಿನ ಮನೆಯಲ್ಲಿ ಕಷಾಯ ಇರುತ್ತದೆ. ಅದೆ ಕಷಾಯದ ಪುಡಿಯನ್ನು ತಂದು ಸಿದ್ಧಪಡಿಸಿ ನಮ್ಮ ಸಿಬ್ಬಂದಿಗೂ ನೀಡಿದ್ದೇನೆ ಅನ್ನುತ್ತಾರೆ ಅವರು.

ಇದು ಡಿಫರೆಂಟ್ ಕಷಾಯ

ಚಕ್ಕೆ, ಲವಂಗ, ಜೀರಿಗೆ, ಬೆಲ್ಲ, ಶುಂಠಿ, ಅಶ್ವಗಂಧ, ಮೆಣಸಿನಕಾಳು, ಪುದೀನ ಸೇರಿದಂತೆ 20ಕ್ಕೂ ಹೆಚ್ಚು ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಕಷಾಯ ಸಿದ್ಧಪಡಿಸಲಾಗಿದೆ. ಸಬ್‍ ಇನ್ಸ್‍ಪೆಕ್ಟರ್ ಭಾರತಿ ಅವರು ತಮ್ಮ ಮನೆಯಲ್ಲೇ ಇವೆಲ್ಲದರ ಪೌಡರ್ ಸಿದ್ಧಪಡಿಸಿ, ಕಷಾಯ ಮಾಡಿ ತಂದು ಸಿಬ್ಬಂದಿಗಳಿಗೆ ನೀಡಿದ್ದಾರೆ.

ಪಾಯಿಂಟ್‍ ಟೂ ಪಾಯಿಂಟ್ ತಲುಪಿಸಬೇಕಿದೆ

ಈಗ ಸದ್ಯಕ್ಕೆ ಸಂಚಾರಿ ಠಾಣೆಯಲ್ಲಿದ್ದ ಸಿಬ್ಬಂದಿಗಳಿಗಷ್ಟೆ ಕಷಾಯ ನೀಡಿದ್ದಾರೆ. ‘ದೊಡ್ಡ ಫ್ಲಾಸ್ಕ್‍ಗೆ ಹುಡುಕುತ್ತಿದ್ದೇನೆ. ಪ್ರತಿ ಪಾಯಿಂಟ್‍ನಲ್ಲಿರುವ ಸಿಬ್ಬಂದಿಗೆ ಬೆಳಗ್ಗೆ ಮತ್ತು ಸಂಜೆ ಬಿಸಿ ಬಿಸಿ ಕಷಾಯ ತಲುಪಿಸಲು ಅನುಕೂಲವಾಗಲಿದೆ’ ಅಂತಾರೆ ಪಿಎಸ್‍ಐ ಭಾರತಿ.

https://www.facebook.com/liveshivamogga/videos/814457622425181/?t=0

ಕರೋನ ಸೋಂಕು ತಡೆಗೆ ಕಷಾಯ ಅನುಕೂಲ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಈಗ ಬಹುತೇಕರು ಕಷಾಯಕ್ಕೆ ಮಾರು ಹೊಗಿದ್ದಾರೆ. ಪೊಲೀಸರು ಅತಿ ಹೆಚ್ಚಾಗಿ ಕರೋನಾಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಿ, ಅವರ ಆರೋಗ್ಯ ವೃದ್ಧಿಗೆ ಪಿಎಸ್‍ಐ ಭಾರತಿ ಅವರು ಕಷಾಯ ನೀಡುತ್ತಿದ್ದಾರೆ. ಇದು ಮಾದರಿಯಾಗಿದ್ದು, ಪಿಎಸ್‍ಐ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

107899250 911221456024432 2372851905210263453 o.jpg? nc cat=100& nc sid=8024bb& nc ohc=tB SDB0SzDwAX82MfB9& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜುಲೈ 20, 2020

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಶಿವಮೊಗ್ಗದಲ್ಲಿ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಮೈತ್ರಾದೇವಿ ಯಡಿಯೂರಪ್ಪ ಸ್ಮರಣಾರ್ಥ ಚಿನ್ನದ ಪದಕ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

ಶಿವಮೊಗ್ಗ, ಹೊಸನಗರದ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

Hulikal Ghat Closed for Traffic Following Landslide; Alternate Routes Announced

Hulikal Ghat Closed for Traffic Following Landslide; Alternate Routes Announced

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

ಹುಲಿಕಲ್ ಘಾಟಿ: ಎಲ್ಲಾ ವಾಹನ ಸಂಚಾರ ಬಂದ್, ಪರ್ಯಾಯ ಮಾರ್ಗ ಪ್ರಕಟ

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

Leave a Comment