ಕುವೆಂಪು ವಿವಿ ಘಟಿಕೋತ್ಸವ ಈ ಬಾರಿ ಫುಲ್ ಡಿಫರೆಂಟ್, ಆನ್‌ಲೈನ್‌ನಲ್ಲಿ ಕಣ್ತುಂಬಿಕೊಳ್ಳಲು ಚಾನ್ಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಜುಲೈ 2020

ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೂ ಕರೋನ ಬಿಸಿ ತಟ್ಟಿದೆ. ಈ ಬಾರಿ ಆನ್‍ಲೈನ್‍ ಮತ್ತು ವೆಬಿನೇರ್ ಘಟಿಕೋತ್ಸವ ನಡೆಯಲಿದೆ.

ಜುಲೈ 29ರಂದು 30ನೇ ಘಟಿಕೋತ್ಸವಕ್ಕೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಘಟಿಕೋತ್ಸವ ಆರಂಭವಾಗಲಿದೆ. ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಉಪಸ್ಥಿತರಿರಲಿದ್ದಾರೆ. ಒಡಿಶಾದ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಪಿ.ವಿ.ಕೃಷ್ಣಭಟ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

110321691 1175782002783218 6594214308632012397 o.jpg? nc cat=108& nc sid=110474& nc ohc=NEBCzsVU 4AX804v6Q& nc ht=scontent.fblr11 1

ಆನ್‍ಲೈನ್‍ ಮೂಲಕ ಘಟಿಕೋತ್ಸವ

ಕೋವಿಡ್ 19 ಹಿನ್ನೆಲೆ ಈ ಬಾರಿ ಘಟಿಕೋತ್ಸವದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕುವೆಂಪು ವಿವಿಯ ವೆಬ್‍ಸೈಟ್‍ನಲ್ಲಿ ಲೈವ್ ಪ್ರಸಾರ ಆಗಲಿದೆ. ಇನ್ನು ಯು ಟ್ಯೂಬ್ ಮತ್ತು ವೆಬಿನೇರ್‍ ಮೂಲಕವು ಘಟಿಕೋತ್ಸವವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಈಗಾಗಲೇ ವಿದ್ಯಾರ್ಥಿಗಳಿಗೆ ಲಿಂಕ್‍ಗಳನ್ನು ಮೆಸೇಜ್ ಮಾಡಲಾಗಿದೆ. ಕೆಲವೆ ಕೆಲವು ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಪಿಹೆಚ್‍ಡಿ ಪದವಿ ನೀಡಲಾಗುತ್ತದೆ. ಉಳಿದವರಿಗೆ ಪೋಸ್ಟ್ ಮೂಲಕ ಪದಕ ಕಳುಹಿಸಲಾಗುತ್ತದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.

ಖಾದಿ ಗೌನು, ಶಿವಪ್ಪನಾಯಕನ ಧಿರಿಸು, ಮೈಸೂರು ಪೇಟಾ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆ ಈ ಬಾರಿ ಘಟಿಕೋತ್ಸವದಲ್ಲಿ ಖಾದಿ ರಾರಾಜಿಸಲಿದೆ. ಕುಲಪತಿ, ಕುಲಸಚಿವ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಲ್ಲ ಖಾದಿ ಬಟ್ಟೆ ಧರಿಸಲಿದ್ದಾರೆ. ಖಾದಿ ಗೌನ್ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಶಿವಪ್ಪನಾಯಕ ತೊಡುತ್ತಿದ್ದ ಮಾದರಿಯ ಧಿರಿಸು ತೊಡಲಿದ್ದೇವೆ. ಮೈಸೂರು ಪೇಟಾ ಹಾಕಲಿದ್ದೇವೆ ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದರು.

ಗೌರವ ಡಾಕ್ಟರೇಟ್ ಇಲ್ಲ

ಈ ಬಾರಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರ್ ಪದವಿ ನೀಡಲಾಗುತ್ತಿಲ್ಲ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಗೌರವ ಡಾಕ್ಟರೇಟರ್ ಸಂಬಂಧ ಪಟ್ಟಿಯೊಂದನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಆದರೆ ಈ ಕುರಿತು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಕುಲಸಚಿವ ಪ್ರೊ. ಎಸ್‍.ಎಸ್.ಪಾಟೀಲ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 27, 2020

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment