
ಶಿವಮೊಗ್ಗ ಲೈವ್.ಕಾಂ |SHIMOGA NEWS | 9 NOVEMBER 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಅನಾರೋಗ್ಯದಿಂದ ಮೃತಪಟ್ಟಿದ್ದ ಕಲಾವಿದರೊಬ್ಬರ ಕುಟುಂಬಕ್ಕೆ, ಶಿವಮೊಗ್ಗದ ಪತ್ರಕರ್ತರ ತಂಡವೊಂದು ನೆರವು ನೀಡಿದೆ. ಮನೆಗೆ ತೆರಳಿ ಸಾಂತ್ವನ ಹೇಳಿ ನೆರವು ಒದಗಿಸಿದ್ದಾರೆ.
ಶಿವಮೊಗ್ಗದ ಕಲಾವಿದ ಕಿಶೋರ್ ಇತ್ತೀಚೆಗೆ ಮೃತಪಟ್ಟಿದ್ದಾರೆ. ಈ ನೋವು ಮಾಸುವ ಮುನ್ನವೆ ಕಿಶೋರ್ ಅವರ ತಾಯಿ ಅಸುನೀಗಿದರು. ಹಾಗಾಗಿ ಅವರ ಕುಟುಂಬ ಆಘಾತಕ್ಕೀಡಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಿವಮೊಗ್ಗ ಮಲೆನಾಡು ಎಕ್ಸ್‍ಪ್ರೆಸ್ ವತಿಯಿಂದ ಧನ ಸಹಾಯಕ್ಕೆ ಮನವಿ ಮಾಡಲಾಗಿತ್ತು.

ಮೊದಲಿಗೆ 35,100 ರೂ. ಹಣ ಸಂಗ್ರಹಿಸಿ ಕಲಾವಿದ ಕಿಶೋರ್ ಅವರ ಕುಟುಂಬಕ್ಕೆ ನೀಡಲಾಯಿತು. ಬಳಿಕ ಪತ್ರಿಕೆ ವತಿಯಿಂದ 50 ಸಾವಿರ ರೂ. ನೆರವು ನೀಡಲಾಗಿದೆ. ಶಿವಮೊಗ್ಗ ಪತ್ರಿಕಾ ಭವನದ ಅಧ್ಯಕ್ಷ ಮಂಜುನಾಥ್ ಅವರು ಕಲಾವಿದ ಕಿಶೋರ್ ಕುಟುಂಬದವರಿಗೆ ನೆರವಿನ ಹಣ ಹಸ್ತಾಂತರಿಸಿದರು.
ಮಲೆನಾಡು ಎಕ್ಸ್‍ಪ್ರೆಸ್ ಸಂಪಾದಕ ಶಿ.ಜು.ಪಾಶ, ಪತ್ರಕರ್ತರಾದ ಸುಧೀರ್, ಪದ್ಮನಾಭ್, ವಸೀಂ ಈ ವೇಳೆ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಮನೆಯನ್ನೇ ಬಂದೂಕು ಕಾರ್ಖಾನೆ ಮಾಡಿಕೊಂಡಿದ್ದ ಕಾರ್ಪೆಂಟರ್, ಎಲ್ಲಿ? ಎಷ್ಟು ಬಂದೂಕು ಸಿಕ್ತು?

- ಕಾಂಗ್ರೆಸ್ನದ್ದು ‘3-C ಸರ್ಕಾರ’, ಮಿನಿಸ್ಟರ್ ರಾಜೀನಾಮೆಗೆ ಶಿವಮೊಗ್ಗದಲ್ಲಿ ಆಗ್ರಹ, ಏನಿದು ಮೂರು C?

- ಶಿವಮೊಗ್ಗ ಸಿಟಿಯ ವಿವಿಧೆಡೆ ಫೆಬ್ರವರಿ 6, 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

- ಶಿವಮೊಗ್ಗ, ಭದ್ರಾವತಿಯಲ್ಲಿ ತುಸು ತಗ್ಗಿದ ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರಲಿದೆ?

- ಪೂಜಾ ಗೌಡ ನಂಬಿ ಅರ್ಧ ಕೋಟಿ ಹಣ ಕಳೆದುಕೊಂಡ ಶಿವಮೊಗ್ಗದ ಸೇಲ್ಸ್ಮನ್, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






