ಶಿವಮೊಗ್ಗ ಸಿಟಿಯಲ್ಲಿ ಮೂರನೇ ಬಾರಿ ನಿಷೇಧಾಜ್ಞೆ ವಿಸ್ತರಣೆ, ಯಾವ ದಿನಾಂಕದವರೆಗೆ ನಿಷೇಧಾಜ್ಞೆ ಇರಲಿದೆ?

ಶಿವಮೊಗ್ಗ ಲೈವ್.ಕಾಂ |SHIMOGA NEWS | 8 DECEMBER 2020

ಶಿವಮೊಗ್ಗದಲ್ಲಿ ನಿಷೇಧಾಜ್ಞೆಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಹೆಚ್ಚು ಅವಧಿಗೆ ವಿಸ್ತರಣೆ ಮಾಡಲಾಗಿದೆ.

ಡಿಸೆಂಬರ್ 12ರ ಬೆಳಗ್ಗೆ 10 ಗಂಟೆವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ALSO READ | ಶಿವಮೊಗ್ಗ ಸಿಟಿಯ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ.9ರಂದು ನಾಲ್ಕು ಗಂಟೆ ಕರ್ಫ್ಯೂ ಸಡಿಲಿಕೆ

Kalleshwara-Enterprises.webp

ಮೂರನೇ ಬಾರಿ ವಿಸ್ತರಣೆ

ಬಜರಂಗದಳ ಸಹ ಸಂಚಾಲಕ ನಾಗೇಶ್ ಮೇಲಿನ ಹಲ್ಲೆ ಮತ್ತು ಆ ಬಳಿಕ ಸಂಭವಿಸಿದ ಗಲಭೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಆ ಬಳಿಕ ಎರಡು ಬಾರಿ ನಿಷೇಧಾಜ್ಞೆ ವಿಸ್ತರಿಸಲಾಗಿತ್ತು. ಡಿ.9ರಂದು ಬೆಳಗ್ಗೆ 10 ಗಂಟೆಗೆ ನಿಷೇಧಾಜ್ಞೆ ತೆರವಾಗಬೇಕಿತ್ತು. ಆದರೆ ಮೂರನೇ ಬಾರಿಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದ್ದು, ಪೊಲೀಸ್ ಇಲಾಖೆ ಇದಕ್ಕೆ ಕಾರಣ ತಿಳಿಸಿಲ್ಲ.

ALSO READ | ಶಿವಮೊಗ್ಗದಲ್ಲಿ ಶಾಂತಿ ಸಭೆ, ಮುಂದುವರೆಯುತ್ತಾ ನಿಷೆಧಾಜ್ಞೆ, ಸಭೆಯಲ್ಲಿ ಏನೆಲ್ಲ ಅಭಿಪ್ರಾಯ ವ್ಯಕ್ತವಾಯ್ತು?

ಕರ್ಫ್ಯೂ ಸಡಿಲಿಕೆ

ದೊಡ್ಡಪೇಟೆ, ಕೋಟೆ ಮತ್ತು ತುಂಗಾ ನಗರ ಠಾಣೆ ವ್ಯಾಪ್ತಿಯ ಹಳೆ ಶಿವಮೊಗ್ಗ ಭಾಗದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇಲ್ಲಿ ಜನರು ಮನೆ ಬಿಟ್ಟು ಹೊರಗೆ ಬರುವಂತಿಲ್ಲ. ಹಾಗಾಗಿ ಪ್ರಮುಖ ವಹಿವಾಟು ಕೇಂದ್ರ ಗಾಂಧಿ ಬಜಾರ್ ಸಂಪೂರ್ಣ ಸ್ಥಬ್ಧವಾಗಿದೆ. ಡಿ.9ರಂದು ಬೆಳಗ್ಗೆ 7 ರಿಂದ 11 ಗಂಟೆವರೆಗೆ,  ನಾಲ್ಕು ಗಂಟೆಯ ಅವಧಿಗೆ ಕರ್ಫ್ಯೂ ರಿಲೀಫ್ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment