ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ, ಹಲವೆಡೆ ವಿದ್ಯುತ್ ಕಟ್

ಶಿವಮೊಗ್ಗ ಲೈವ್.ಕಾಂ |SHIMOGA NEWS | 8 DECEMBER 2020

ವಾಯುಭಾರ ಕುಸಿತ ಮತ್ತು ಚಂಡಮಾರುತದ ಪರಿಣಾಮ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ.

RECENT NEWS | ಶಿವಮೊಗ್ಗ ಸಿಟಿಯಲ್ಲಿ ಮೂರನೇ ಬಾರಿ ನಿಷೇಧಾಜ್ಞೆ ವಿಸ್ತರಣೆ, ಯಾವ ದಿನಾಂಕದವರೆಗೆ ನಿಷೇಧಾಜ್ಞೆ ಇರಲಿದೆ?

ಎಲ್ಲೆಲ್ಲಿ ಮಳೆಯಾಗುತ್ತಿದೆ?

Kalleshwara-Enterprises.webp

ಶಿವಮೊಗ್ಗ ಸಿಟಿ | ಎರಡು ದಿನದಿಂದ ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಸೋಮವಾರ ಸಂಜೆ ಕೆಲ ಹೊತ್ತು ಮಳೆಯಾಗಿತ್ತು. ಇವತ್ತು ರಾತ್ರಿ ಪುನಃ ಮಳೆಯಾಗುತ್ತಿದೆ. ಕೆಲವು ಕಡೆ ವಿದ್ಯುತ್ ಕಡಿತವಾಗಿದೆ.

ಶಿವಮೊಗ್ಗ ತಾಲೂಕು | ತಾಲೂಕಿನ ಹಲವು ಕಡೆ ಮಳೆಯಾದ ವರದಿಯಾಗಿದೆ. ದಿಢೀರ್ ಮಳೆಯಿಂದ ಜನ, ವಾಹನ ಸಂಚಾರದ ಮೇಲೆ ಪರಿಣಾಮ ಬೀರಿತ್ತು.

RECENT NEWS | ಶಿವಮೊಗ್ಗ ಆಲ್ಕೊಳ ಸರ್ಕಲ್ನಲ್ಲಿ ಐಪಿಎಸ್ ಅಧಿಕಾರಿ ಕಾರು, ಟಿವಿಎಸ್ ಮೊಪೆಡ್ ಡಿಕ್ಕಿ

ಹೊಸನಗರ | ತಾಲೂಕಿನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ರಾತ್ರಿ 8 ಗಂಟೆ ಹೊತ್ತಿಗೆ ಮಳೆ ಶುರುವಾಗಿದ್ದು, ನಿರಂತರವಾಗಿದೆ.

ಭದ್ರಾವತಿ | ವಿವಿಧೆಡೆ ಮಳೆಯಾದ ವರದಿಯಾಗಿದೆ. ಮಿಂಚು, ಗುಡುಗು ಕೂಡ ಇದೆ.

ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಕೆಲವು ಕಡೆ ಮಾಳೆಯಾಗಿರುವ ವರದಿಯಾಗಿದೆ. ಚಂಡಮಾರುತ ಮತ್ತು ವಾಯು ಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಐದು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

(Reference Image)

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment