ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 11 DECEMBER 2020
ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಶಿವಮೊಗ್ಗದಲ್ಲೂ ಬೆಂಬಲ ವ್ಯಕ್ತವಾಗಿದೆ. ಸರ್ಕಾರಿ ಸಾರಿಗೆ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮುಷ್ಕರಕ್ಕೆ ಕಾರಣ ಏನು?
- ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ವೇತನ ತಾರತಮ್ಯವನ್ನು ನಿವಾರಿಸಬೇಕು.
- ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾರಿಗೆ ನೌಕರರ ಬಂಧನಕ್ಕೆ ತೀವ್ರ ಆಕ್ರೋಶ.
ಬಸ್ ಸಂಚಾರ ಸ್ಟಾಪ್
ಮುಷ್ಕರದ ಹಿನ್ನೆಲೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ದೂರದ ಊರುಗಳಿಗೆ ತೆರಳುವ ಬಸ್‍ಗಳನ್ನು ನಿಲ್ಲಿಸಲಾಯಿತು. ಬೇರೆ ಕಡೆಯಿಂದ ಬರುತ್ತಿದ್ದ ಬಸ್‍ಗಳು ಮಾತ್ರ ಪ್ರಯಾಣ ಮುಂದುವರೆಸಿದವು.
ಭದ್ರಾವತಿ, ಆಗುಂಬೆ ಬಸ್ ಸಂಚಾರ
ನಗರ ಸಾರಿಗೆ ಬಸ್‍ಗಳ ಸಂಚಾರವಿತ್ತು. ಭದ್ರಾವತಿ – ಶಿವಮೊಗ್ಗ, ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ ಸೇರಿದಂತೆ ನಗರ ಸಂಚಾರ ಬಸ್‍ಗಳು ಸಂಚರಿಸುತ್ತಿವೆ. ಆದರೆ ಇವುಗಳ ಸಂಖ್ಯೆ ಕಡಿಮೆ ಇತ್ತು.
ಪ್ರಯಾಣಿಕರ ಪರದಾಟ
ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಕುಟುಂಬ ಸಹಿತ, ಲಗೇಜ್ ಹೊತ್ತು ಬಂದವರು ಬಸ್ ಸಿಗದೆ ನಿಲ್ದಾಣದಲ್ಲೇ ಕುಳಿತಿರುವುದು ಸಾಮಾನ್ಯವಾಗಿತ್ತು. ದೂರದ ಊರುಗಳಲ್ಲಿ ಉದ್ಯೋಗಿಗಳು ಕೂಡ ಬಸ್‍ಗಾಗಿ ಕೂದು ಕೂತಿದ್ದಾರೆ.
VIDEO REPORT
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]