ಪ್ರೀತಿ, ವಾತ್ಸಲ್ಯಕ್ಕೆ ಎತ್ತಿದ ಕೈ, ಖಡಕ್ ಕಾರ್ಯಾಚರಣೆಗೂ ಈಕೆ ಸೈ, ಗೀತಾ ಬಗ್ಗೆ ಗೊತ್ತಿರಬೇಕಾದ ಟಾಪ್ 5 ವಿಚಾರಗಳಿವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

127112669 1012323639247546 5792079912860954992 o.jpg? nc cat=105&ccb=2& nc sid=730e14& nc ohc=DI4omhxw3VgAX88vbDT& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020

ಆಕೆ ಸಕ್ರೆಬೈಲು ಬಿಡಾರದ ಪಾಲಿನ ಹಿರಿಯಜ್ಜಿ. ಬಿಡಾರದ ಪ್ರತಿ ಬೆಳವಣಿಗೆಯನ್ನು ಪ್ರತ್ಯಕ್ಷ ಕಂಡಾಕೆ. ಮೃಧು ಸ್ವಭಾವ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಪಾಲಿಗೆ ವಾತ್ಸಲ್ಯ, ಮಮತೆಯ ಗಣಿ. ಕಾರ್ಯಾಚರಣೆಗಿಳಿದರೆ ಆಕೆಯಷ್ಟು ಗಟ್ಟಿಗಿತ್ತಿಯನ್ನು ಕಂಡವರಿಲ್ಲ.

ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಗೀತಾ ಇವತ್ತು ಕೊನೆಯುಸಿರೆಳೆದಿದೆ. ಈಕೆಗೆ 85 ಅಥವಾ 86 ವರ್ಷ ವಯಸ್ಸು ಎಂದು ಅಂದಾಜು ಮಾಡಲಾಗುತ್ತಿದೆ. ಗೀತಾಳನ್ನು ಕಳೆದುಕೊಂಡು ಇಡೀ ಕ್ಯಾಂಪ್ ಶೋಕದಲ್ಲಿದೆ.

ಇದನ್ನೂ ಓದಿ | ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಹಿರಿಯ ಆನೆ ಸಾವು

130939509 1287756374919113 8732143626269812594 n.jpg? nc cat=102&ccb=2& nc sid=730e14& nc ohc=C6vXp0i87pQAX9ZBmQv& nc ht=scontent.fblr11 1

PHOTO | ಗೀತಾಳ ಅಂತ್ಯಸಂಸ್ಕಾರದ ಸಿದ್ಧತೆಯಲ್ಲಿ ಸಿಬ್ಬಂದಿಗಳು

ಗೀತಾಳ ಬಗ್ಗೆ ಗೊತ್ತಿರಬೇಕಾದ 5 ಪಾಯಿಂಟ್‍ಗಳಿವು

  1. 1955 -56ರ ಖೆಡ್ಡಾ ಆಪರೇಷನ್‍ ವೇಳೆ ಕಾಕನಕೋಟೆಯಲ್ಲಿ ಈ ಹೆಣ್ಣಾನೆಯನ್ನು ಸೆರೆ ಹಿಡಿಯಲಾಯಿತು.
  2. ದಾಖಲೆಗಳ ಪ್ರಕಾರ 1964ರಲ್ಲಿ ಗೀತಾ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಬಿಡಲಾಯಿತು. ಆಗ ಆನೆಗೆ ಸುಮಾರು 25 ವರ್ಷ ಎಂದು ಅಂದಾಜಿಸಲಾಗಿದೆ.
  3. ಗೀತಾಗೆ ಎಂಟು ಮಕ್ಕಳು. ದಾಖಲೆಗಳ ಪ್ರಕಾರ ಐದು ಆನೆಯ ಲೆಕ್ಕ ಸಿಕ್ಕಿದೆ. ರಂಗ (ಕೆಲ ದಿನದ ಹಿಂದೆ ಸಕ್ರೆಬೈಲು ಬಳಿ ಕಾಡಾನೆ ದಾಳಿಗೆ ಮೃತಪಟ್ಟಿದೆ), ನೇತ್ರಾ, ಆಲೆ ಆನೆಗಳು (ಸದ್ಯ ಸಕ್ರೆಬೈಲು ಕ್ಯಾಂಪ್‍ನಲ್ಲಿವೆ), ಲಕ್ಷ್ಮೀಶ (ಉಡುಪಿಗೆ ನೀಡಲಾಗಿದೆ), ಶಿವ (ಕೇರಳಕ್ಕೆ ನೀಡಲಾಗಿದೆ).
  4. ಕ್ಯಾಂಪ್‍ನ ಯಾವುದೇ ಆನೆ ಗರ್ಭವತಿಯಾದರೂ ಗೀತಾ ಆನೆಯದ್ದೇ ಆರೈಕೆ. ಡಿಲೆವರಿಗೆ ಆರೇಳು ತಿಂಗಳು ಇರುವ ಹೊತ್ತಿಗಂತೂ, ಗೀತಾ ಆನೆ ಹೆಚ್ಚು ಆರೈಕೆ ಮಾಡುತ್ತಿತ್ತು. ಗರ್ಭವತಿಯಾಗಿರುವ ಆನೆ ಬಳಿ ಉಳಿದ್ಯಾವ ಆನೆಗಳು ಸುಳಿಯದ ಹಾಗೆ ನೋಡಿಕೊಳ್ಳುತ್ತಿತ್ತು. ಆನೆಗಳು ಮರಿ ಹಾಕಿದ ಮೇಲೆ ಬಾಣಂತನದ ವಿಚಾರದಲ್ಲೂ, ಗೀತಾ ಜೊತೆಗಿರಬೇಕು. ಮರಿಗಳ ಲಾಲನೆ ಪಾಲನೆಯಲ್ಲೂ ಈಕೆ ನಿಪುಣೆ. ಕುಂತಿ, ಭಾನುಮತಿ, ನೇತ್ರಾಗೆ ಬಾಣಂತನ ಮಾಡಿದ್ದೇ ಗೀತಾ.
  5. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಧೈರ್ಯವಾಗಿ ಭಾಗವಹಿಸುತ್ತಿತ್ತು. ಕಾಡಾನೆ ಎಷ್ಟೇ ಕೆರಳಿದ್ದರೂ, ಕುಮ್ಕಿ ಆನೆಗಳ ಸಾಲಿನಲ್ಲಿ ಮುಂದೆ ನಿಲ್ಲುತ್ತಿದ್ದದ್ದು ಗೀತಾ. ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗೆ ಅರಿವಳಿಗೆ ಮದ್ದು ಶೂಟ್ ಮಾಡುವಷ್ಟು ಹತ್ತಿರದವರೆಗೆ ಕಾಡಾನೆಯನ್ನು ಕರೆತರುವ ಚಾಕಚಕ್ಯತೆ ಈ ಹಿರಿಯ ಆನೆಗಿತ್ತು.

ಇದನ್ನೂ ಓದಿ | ಸಕ್ರೆಬೈಲು ಬಿಡಾರದ ರಂಗನ ಮೇಲೆ ಕಾಡಾನೆಗಳ ದಾಳಿ, ಸ್ಥಳದಲ್ಲೇ ಸಾವು

ಹಿರಿಯ ಆನೆಯನ್ನು ಕಳೆದುಕೊಂಡು ಸಕ್ರೆಬೈಲು ಆನೆ ಬಿಡಾರ ದುಃಖದಲ್ಲಿದೆ. ರಾಜ್ಯದ ಉಳಿದ್ಯಾವ ಬಿಡಾರದಲ್ಲೂ ಗೀತಾಳಷ್ಟು ವಯಸ್ಸಿನ ಆನೆಗಳು ಇಲ್ಲ. ಹಾಗಾಗಿ ಈಕೆ ರಾಜ್ಯದ ಎಲ್ಲಾ ಅರಣ್ಯಾಧಿಕಾರಿಗಳಿಗು ಪರಿಚಯ. ಗೀತಾ ಇನ್ನಿಲ್ಲ ಎಂಬ ವಿಚಾರ ರಾಜ್ಯದ ಅರಣ್ಯ ಇಲಾಖೆಗೆ ನೋವುಂಟು ಮಾಡಿದೆ.

ಮಾಹಿತಿ : ನಾಗರಾಜ್, ಡಿಎಫ್‍ಓ, ಶಿವಮೊಗ್ಗ ವನ್ಯಜೀವಿ ವಿಭಾಗ | ಡಾ.ವಿನಯ್, ವನ್ಯಜೀವಿ ವೈದ್ಯರು

129722226 1022058594940717 1962776210255359546 n.jpg? nc cat=107&ccb=2& nc sid=730e14& nc ohc=VrZsJOFIqiEAX Mfrl3& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 13, 2020

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್‌, ದಾಖಲಾಯ್ತು ಕೇಸ್

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಗುಡ್ಡೇಕಲ್‌ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ಕಾರಿನಲ್ಲಿ ದಿಢೀರ್‌ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

ಕಾರಿನಲ್ಲಿ ದಿಢೀರ್‌ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

ಜಯನಗರ ಪೊಲೀಸ್‌ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

Leave a Comment