ಕೇಕ್‌, ಬಿಸ್ಕತ್ತು, ಕುಕೀಸ್‌ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

ಶಿವಮೊಗ್ಗ: ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಬಯಸುವವರಿಗಾಗಿ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಏಪ್ರಿಲ್ 8 ರಿಂದ ಮೇ 7 ರವರೆಗೆ ಒಂದು ತಿಂಗಳ ಅವಧಿಯ ಬೇಕರಿ ಉತ್ಪನ್ನಗಳ ತಯಾರಿಕೆ (bakery business) ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗಿದೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಏನೇನೆಲ್ಲ ಹೇಳಿಕೊಡಲಾಗುತ್ತದೆ?

Agriculture-University-Iruvakki-sagara-campus-board

ತರಬೇತಿ ಶಿಬಿರದಲ್ಲಿ ಬೆಣ್ಣೆ ಬಿಸ್ಕತ್ತು, ಕೋಕೊನಟ್ ಕುಕೀಸ್, ಮಸಾಲ ಬಿಸ್ಕತ್ತು, ಪೀನಟ್ ಕುಕೀಸ್ ಸೇರಿದಂತೆ ವಿವಿಧ ಬಗೆಯ ಬಿಸ್ಕತ್ತುಗಳ ತಯಾರಿಕೆಯನ್ನು ಕಲಿಸಲಾಗುತ್ತದೆ. ಇದರೊಂದಿಗೆ ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಪೇಸ್ಟ್ರೀ ಕೇಕ್, ಬಟರ್ ಐಸಿಂಗ್ ಹಾಗೂ ಚಾಕಲೇಟ್ ಕೇಕ್ ಸೇರಿದಂತೆ ಹತ್ತಾರು ವಿಧದ ಕೇಕ್‌ಗಳ ತಯಾರಿಕೆಯ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಗುವುದು.

ಇದನ್ನೂ ಓದಿ : ಕಾರಿನಲ್ಲಿ ದಿಢೀರ್‌ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

ಕೇಕ್ ಮತ್ತು ಬಿಸ್ಕತ್ತುಗಳಲ್ಲದೆ, ದಿನನಿತ್ಯದ ಬಳಕೆಯ ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ, ಪಪ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಖಾರ ಹಾಗೂ ಡೋ ನಟ್ ತಯಾರಿಕೆಯ ಬಗ್ಗೆಯೂ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ. ಬೇಕರಿ ಉದ್ಯಮವನ್ನು ಪ್ರಾರಂಭಿಸಲು ಇಚ್ಛಿಸುವವರಿಗೆ ಈ ಕೌಶಲ್ಯಾಭಿವೃದ್ಧಿ ತರಬೇತಿಯು ಅತ್ಯಂತ ಉಪಯುಕ್ತವಾಗಲಿದೆ.

ಆಸಕ್ತ ಅಭ್ಯರ್ಥಿಗಳು ₹4,500 ತರಬೇತಿ ಶುಲ್ಕವನ್ನು ಪಾವತಿಸಿ, ಏಪ್ರಿಲ್ 7 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಕರ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗಾಗಿ ನವುಲೆ ಕೃಷಿ ಮಹಾವಿದ್ಯಾಲಯದ ಡಾ. ಜಯಶ್ರೀ ಎಸ್. ಮೊಬೈಲ್‌ ನಂಬರ್‌: 9449187763 ಅಥವಾ ಜಯಶಂಕರ ಮೊಬೈಲ್‌ ನಂಬರ್‌: 9686555897 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Sunrise Facility Services, Sri sai Trust Shimoga

Leave a Comment