ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 05 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂಡಗದ್ದೆ ಸಮೀಪ ಮೂರು ಮರಿಗಳ ಜೊತೆ ಹುಲಿ ಪ್ರತ್ಯಕ್ಷ. ನಡು ರಸ್ತೆಯಲ್ಲಿ ಕಾಣಿಸಿದ ಹುಲಿ ಕಂಡು ಜನರಲ್ಲಿ ಭಯ. ವಿಡಿಯೋ ವೈರಲ್.
ಹುಲಿ ಮತ್ತು ಅದರ ಮೂರು ಮರಿಗಳು ನಡು ರಸ್ತೆಗೆ ಬಂದು, ಕಾಡಿಗೆ ಹಿಂತಿರುಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಡಗದ್ದೆ ಸಮೀಪ ಭಾನುವಾರ ರಾತ್ರಿ ಹುಲಿಗಳು ಪ್ರತ್ಯಕ್ಷ ಎಂದು ಮೆಸೇಜುಗಳನ್ನು ಫಾರ್ವರ್ಡ್ ಮಾಡಲಾಗುತ್ತಿದೆ. ಈ ಭಾಗದಲ್ಲಿ ಓಡಾಡುವ ವಾಹನ ಸವಾರರೆ ಎಚ್ಚರ ಎಂದು ಮೆಸೇಜ್ ಕಳುಹಿಸಲಾಗುತ್ತಿದೆ.
ಅಸಲಿ ಕಥೆ ಏನು ಗೊತ್ತಾ?
ಹುಲಿ ಪ್ರತ್ಯಕ್ಷವಾದ ಬಗ್ಗೆ ಶಿವಮೊಗ್ಗ ಲೈವ್.ಕಾಂ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳನ್ನು ಸಂಪರ್ಕಿಸಿದಾಗ, ಅದು ಮಂಡಗದ್ದೆಯಲ್ಲ, ಹುಲಿಗಳು ಈ ಭಾಗದ್ದಲ್ಲ ಅನ್ನುವುದನ್ನು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವುದು, ಕೆಲವು ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು.
ವಿಡಿಯೋದ ಮೂಲ ಕೆದಕಿದರೆ
ಇನ್ನು, ಯು ಟ್ಯೂಬ್ನಲ್ಲಿ ಜಾಲಾಡಿದರೆ, ಇದೆ ಹುಲಿಗಳ ಕುರಿತು ಮೂರ್ನಾಲ್ಕು ವಿಡಿಯೋಗಳು ಸಿಗುತ್ತವೆ.
2020ರ ನವೆಂಬರ್ 10ರಂದು ಪ್ರಶಾಂತ್ ಮೊನ್ನಪ್ಪಾ ಎಂಬುವವರು ಮೊದಲ ಬಾರಿಗೆ ಈ ಹುಲಿಗಳ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಎರಡು ವಿವ್ಸ್ ದಾಖಲಾಗಿದೆ.
https://www.youtube.com/watch?v=TolyREojmew
ಆ ಬಳಿಕ JMS G1 VLogs ಎಂಬ ಯು ಟ್ಯೂಬ್ ಚಾನೆಲ್ನಲ್ಲಿಯೂ ಇದೇ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದೆ. 2020ರ ಡಿಸೆಂಬರ್ 24ರಂದು ಈ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
https://www.youtube.com/watch?v=ju9L6deA8NA
ಮಂಡಗದ್ದೆ ಬಳಿ ರಸ್ತೆಯಲ್ಲಿ ಹುಲಿಗಳು ಕಾಣಿಸಿಕೊಂಡಿವೆ ಅನ್ನುವುದು ಸುಳ್ಳು. ಹಾಗಾಗಿ ವಾಹನ ಸಾವರರು, ಸ್ಥಳೀಯರು ಆತಂಕಪಡುವ ಅಗತ್ಯವಿಲ್ಲ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]