ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರ, ಬೆಳೆ ಹಾನಿ, ಮದುವೆ ಸಂಭ್ರಮಕ್ಕೆ ಅಡ್ಡಿ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 08 JANUARY 2021

ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತೂ ಮಳೆ ಮುಂದುವರೆದಿದೆ. ಕೆಲವು ಕಡೆ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದೆ.

ಸಿಟಿಯಲ್ಲಿ ಮೋಡ ಕವಿದ ವಾತಾವರಣ

ಶಿವಮೊಗ್ಗ ಸಿಟಿಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಕೆಲವು ಕ್ಷಣ ಬಿಸಿಲು ಪ್ರತ್ಯಕ್ಷವಾಗುತ್ತಿತ್ತು. ಸಂಜೆ ವೇಳೆ ಮಳೆ ಆರಂಭವಾಗಿದೆ. ಜನ ಜೀವನಕ್ಕೆ ತೊಂದರೆ ಉಂಟಾಗಿದೆ.

ಮಧ್ಯಾಹ್ನದಿಂದಲೇ ಮಳೆ ಶುರು

ಜಿಲ್ಲೆಯ ವಿವಿಧೆಡೆ ಮಧ್ಯಾಹ್ನದಿಂದ ಮಳೆ ಆರಂಭವಾಗಿದೆ. ಚರಂಡಿಗಳು, ಹಳ್ಳಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾಹನ ಸವಾರರಿಗೆ ಇದು ಸಮಸ್ಯೆ ಉಂಟು ಮಾಡಿದೆ.

ಮದುವೆ ಮನೆ ಸಂಭ್ರಮಕ್ಕೆ ಅಡ್ಡಿ

ಶಿಕಾರಿಪುರದ ಶೀರಿಹಳ್ಳಿ ತಾಂಡದಲ್ಲಿ ಹಾಲೇಶ್, ನಿರ್ಮಲಾ ಅವರ ಮದುವೆ ಸಮಾರಂಭಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ಅಡುಗೆ ಮಾಡುತ್ತಿದ್ದಾಗ ಮಳೆಯಾಗಿದ್ದು, ದಿನಸಿ ವಸ್ತುಗಳು ಮಳೆ ನೀರಿನಿಂದ ಹಾನಿಯಾಗಿದೆ.

136678632 1305082816519802 5271439460605871901 n.png? nc cat=106&ccb=2& nc sid=730e14& nc ohc=YrogXoZlEJYAX9RXa6K& nc ht=scontent.fblr4 3

ರಸ್ತೆ ಮೇಲೆ ನೀರೋ ನೀರು

ಸಾಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿ.ಹೆಚ್‍.ರಸ್ತೆಯ ಶೋ ರೂಂ ಒಂದ ಮುಂದೆ ಚರಂಡಿ ತುಂಬಿ, ರಸ್ತೆ ಮೇಲೆ ನೀರು ಹರಿಯುತ್ತಿದೆ.

134804937 1305082779853139 465938523115044878 n.png? nc cat=100&ccb=2& nc sid=730e14& nc ohc=LLKuf4rT8tUAX90qNrn& nc ht=scontent.fblr4 3

ಬೆಳ ಹಾನಿ, ರೈತರಿಗೆ ಆತಂಕ

ಅಕಾಲಿಕೆ ಮಳೆ ರೈತರಿಗೆ ತೀವ್ರ ಸಮಸ್ಯೆ ಉಂಟು ಮಾಡಿದೆ. ಕೊಯ್ಲಿಗೆ ಕಾದಿದ್ದ ಭತ್ತದ ಬೆಳೆ ಹಾನಿಯಾದ ವರದಿಯಾಗಿದೆ. ಹತ್ತಿ ಬಿಡಿಸಲು ಕೂಡ ಸಮಸ್ಯೆಯಾಗಿದೆ.

136190933 1305082793186471 5016009506277520263 n.png? nc cat=107&ccb=2& nc sid=730e14& nc ohc=IV hFE TgHMAX82RZAi& nc ht=scontent.fblr4 2

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment