ಶಿವಮೊಗ್ಗ ಸೆಂಟ್ರಲ್ ಜೈಲ್ ಕೈದಿಗಳ ಜೊತೆ ಮಾತಾಡೋಕೆ ವಿಡಿಯೋ ಕಾಲ್‌ಗೆ ಅವಕಾಶ, ಹೇಗದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

131951794 1031215290691714 4061890617426774129 n.jpg? nc cat=108&ccb=2& nc sid=730e14& nc ohc=FkyaIRRMuUEAX9p7CwQ& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JANUARY 2021

ಕೋವಿಡ್ ಹಿನ್ನೆಲೆ ಶಿವಮೊಗ್ಗ ಕಾರಾಗೃಹದ ಬಂಧಿಗಳನ್ನು ಅವರ ಸಂಬಂಧಿಕರು ನೇರವಾಗಿ ಭೇಟಿಯಾ ಆಗುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಸಂದರ್ಶನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜೈಲು ಮುಖ್ಯ ಅಧೀಕ್ಷಕ ಡಾ.ರಂಗನಾಥ್‍ ತಿಳಿಸಿದ್ದಾರೆ.

ಬಂಧಿಗಳೊಂದಿಗೆ ಅವರ ಸಂಬಂಧಿಕರು ಮನೆಯಲ್ಲಿಯೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಸೌಲಭ್ಯ ಇದು. ವಿಡಿಯೋ ಕಾಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸುವಂತೆ ಅವರು ಕೋರಿದ್ದಾರೆ.

ಕಾಲ್ ಮಾಡುವುದು ಹೇಗೆ?

ಗೂಗಲ್‍ನಲ್ಲಿ ಎನ್‍ಪಿಐಪಿ ಎಂದು ಸರ್ಚ್ ಮಾಡಿ ನಂತರ ನ್ಯೂ ವಿಸಿಟ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಬೇಕು.

ಸಂದರ್ಶಕರು ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಕಡ್ಡಾಯ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಬಂಧಿಗಳ ಮಾಹಿತಿ ಭರ್ತಿ ಮಾಡಬೇಕು. ಬಳಿಕ ವಿಡಿಯೋ ಕಾನ್ಫರೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಮೆಸೇಜ್ ಮತ್ತು ಇ-ಮೇಲ್‍ಗೆ ಬಂದಿರುವ ಒಟಿಪಿಯನ್ನು ಪೋರ್ಟಲ್‍ನಲ್ಲಿ ಹಾಕಿ ಓಕೆ ಮಾಡಬೇಕು.

ಕಾರಾಗೃಹದ ಕಡೆಯಿಂದ ನಿಮ್ಮ ಸಂದರ್ಶನದ ಸಮಯವನ್ನು ನಿಗದಿಪಡಿಸಿದ ನಂತರ ನೀವು ನಮೂದಿಸಿದ ಇ-ಮೇಲ್‍ಗೆ ವಿಐಎಸ್‍ಆರ್‍ಎನ್ ನಂಬರ್, ಪಿನ್ ಮತ್ತು ಲಿಂಕ್ ಬರುತ್ತದೆ.

ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ವಿಐಎಸ್‍ಆರ್‍ಎನ್ ನಂಬರ್ ನೋಂದಾಯಿಸಿ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಬೇಕು.

ಬಳಿಕ ಸ್ಕ್ರೀನ್‍ನಲ್ಲಿ ನಿಮ್ಮ ಇ-ಮೇಲ್‍ಗೆ ಕಳುಹಿಸಿರುವ ಪಿನ್ ಮತ್ತು ನಿಮ್ಮ ಮೊಬೈಲ್‍ಗೆ ಬರುವ ಒಟಿಪಿಯನ್ನು ಹಾಕಿ ಕ್ಲಿಕ್ ಮಾಡಿದರೆ ಜಿಟ್ಸಿ ಮುಖಾಂತರ ವಿಡಿಯೋ ಸಂದರ್ಶನಕ್ಕೆ ಹಾಜರಾಗಲು ಕೇಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳ ಜತೆ ಮಾತನಾಡಬಹುದು ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9480806469, 9480806467 ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

137222609 1043894822757094 322437303418384090 o.jpg? nc cat=111&ccb=2& nc sid=730e14& nc ohc=FXf3xO1XGYIAX854qqz& nc ht=scontent.fblr4 2

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment