ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 JANUARY 2021
ದರೋಡೆಗೆ ಹೊಂಚು ಹಾಕಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಐವರನ್ನು ಬಂಧಿಸಲಾಗಿದೆ.
ಹಾರನಹಳ್ಳಿ ಕೆರೆ ಸಮೀಪ ಐವರ ಗ್ಯಾಂಗ್ ದರೋಡೆಗೆ ಹೊಂಚು ಹಾಕಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಇಡೀ ಗ್ಯಾಂಗನ್ನ ವಶಕ್ಕೆ ಪಡೆಯಲಾಗಿದೆ.
ರಾಡ್, ಗರಗಸ, ಖಾರದ ಪುಡಿ
ರತಿಕ್, ಆಂಜನಪ್ಪ, ಹನುಮಂತಪ್ಪ, ಧರ್ಮಪ್ಪ ಮತ್ತು ಸಂತೋಷ್ ಬಂಧಿತರು. ಎಲ್ಲರು ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ಇವರಿಂದ ಬೈಕುಗಳು, ಕಬ್ಬಿಣದ ರಾಡ್, ಖಾರದ ಪುಡಿ, ಗರಗಸವನ್ನು ವಶಕ್ಕೆ ಪಡೆಯಲಾಗಿದೆ.
ನಕಲಿ ಚಿನ್ನ ಮಾರುತ್ತಿದ್ದರು
ಇವರು ನಕಲಿ ಚಿನ್ನ ಮಾರಾಟದಲ್ಲಿ ನಿಸ್ಸೀಮರಾಗಿದ್ದರು ಎಂದು ತಿಳಿದು ಬಂದಿದೆ. ನಕಲಿ ಆಭರಣಗಳನ್ನು ತೋರಿಸಿ, ಮಾರಾಟ ಮಾಡುವುದಾಗಿ ನಂಬಿಸಿ, ವಂಚಿಸುತ್ತಿದ್ದರು.
ದರೋಡೆಗೆ ಹೊಂಚು ಹಾಕಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕುಂಸಿ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ಮಠಪತಿ ನೇತೃತ್ವದ ತಂಡ ದಾಳಿ ನಡೆಸಿ, ದರೋಡೆ ಕೋರರನ್ನು ಬಂಧಿಸಿದೆ. ವಿಚಾರಣೆ ನಡೆಯುತ್ತಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422