ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 03 FEBRUARY 2021
ತೋಟದೊಳಗೆ ನುಗ್ಗಿದ್ದ ದನಕ್ಕೆ ಹೊಡೆದಿದ್ದ ವ್ಯಕ್ತಿ ಮೇಲೆದನದ ಮಾಲೀಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ ದನಕ್ಕೆ ಹೊಡೆದಿದ್ದಕ್ಕೆ ಪಂಚಾಯಿತಿ ವತಿಯಿಂದ ಮೂರು ಸಾವಿರ ರೂ. ದಂಡ ವಿಧಿಸಲಾಗಿದೆ.
ತೋಟಕ್ಕೆ ನುಗ್ಗಿದ್ದ ದನ ಓಡಿಸಿದ್ದರು
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿ ಬಿದರಗೋಡು ಗ್ರಾಮದ ಸತೀಶ್ ಎಂಬುವವರು ಹಲ್ಲೆಗೊಳಗಾದವರು. ಶಂಕರಗೌಡ ಎಂಬುವವರ ತೋಟದಲ್ಲಿ ಸತೀಶ್ ಕೆಲಸ ಮಾಡುತ್ತಿದ್ದರು. ಮೂರು ದಿನದ ಹಿಂದೆ ಶಂಕರಗೌಡ ಅವರ ತೋಟಕ್ಕೆ ನುಗ್ಗಿದ್ದ ದನವನ್ನು ಸತೀಶ್ ಹೊಡೆದು ಓಡಿಸಿದ್ದರು.
ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ
ಹೊಡೆದಿದ್ದಕ್ಕೆ ಮೂರು ಸಾವಿರ ದಂಡ
ದನವನ್ನು ಹೊಡೆದು ಓಡಿಸಿದ್ದಕ್ಕೆ ಅದರ ಮಾಲೀಕ ನವೀನ್ ಎಂಬುವವರು ಪಂಚಾಯಿತಿ ಕರೆಸಿದ್ದರು. ವಿಚಾರಣೆ ಮಾಡಿ, ಸತೀಶ್‍ಗೆ ಮೂರು ಸಾವಿರ ರೂ. ದಂಡ ವಿಧಿಸಲಾಗಿತ್ತು. ನಾಲ್ಕು ದಿನದ ಗಡುವು ನೀಡಲಾಗಿತ್ತು. ಆದರೆ ಪಂಚಾಯಿತಿಯಾದ ಮರುದಿನವೆ ಸತೀಶ್ ಮನೆಗೆ ಬಂದ ನವೀನ್ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಂಡಿರುವ ಸತೀಶ್ ನನ್ನು ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






