SHIMOGA | ಮೂರು ದಿನ ನಾಟಕೋತ್ಸವ, ಆನ್‌ಲೈನಲ್ಲೂ ಸಿಗುತ್ತೆ ಟಿಕೆಟ್, ಯಾವೆಲ್ಲ ನಾಟಕಗಳಿವೆ? ಟಿಕೆಟ್ ದರವೆಷ್ಟು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್, ವಿಶ್ವಪಥ ಕಲಾ ಸಂಗಮ (ವಿಕಸಂ) ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಫೆ.5 ರಿಂದ 7 ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ವಿಕಸಂ ಸಂಸ್ಥೆಯ ಮುಖ್ಯಸ್ಥ ಚೇತನ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್  ಫೆ.5 ರಂದು ಭಾಸ್ಕರ್ ನೀನಾಸಂ ನಿರ್ದೇಶನದ ಊರು ಸುಟ್ಟರು ಹನುಮಪ್ಪ ಹೊರಗ, ಫೆ.6 ರಂದು ದುಂಡಿರಾಜ್ ರಚನೆಯ ಅಶೋಕ್ ಬಿ. ನಿರ್ದೇಶನದ ಪುಕ್ಕಟೆ ಸಲಹೆ, ಫೆ.7 ರಂದು ಕಂಬಾರರ ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.

ಪ್ರತಿ ನಾಟಕಕ್ಕೂ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮೂರು ನಾಟಕಗಳ ಟಿಕೇಟನ್ನು ಒಟ್ಟಿಗೆ ಖರೀದಿಸಿದರೆ 120 ರೂ ನೀಡಬಹುದು. ಬುಕ್ ಮೈ ಶೋ ಮೂಲಕ ಆನ್‍ಲೈನ್‍ನಲ್ಲೂ ಟಿಕೆಟ್ ಲಭ್ಯವಿರುತ್ತದೆ. ಇದಲ್ಲದೇ ದುರ್ಗಿಗುಡಿಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ನೆಹರೂ ರಸ್ತೆಯ ರಾಯಲ್ ಕಾಫಿ, ಪೊಲೀಸ್ ಚೌಕಿಯ ಲಕ್ಷ್ಮೀನಾರಾಯಣ ಸ್ವೀಟ್ಸ್, ದ್ರೌಪದಮ್ಮ ಸರ್ಕಲ್ಲಿನ ಡಿ.ಜೆ. ಫ್ಯಾನ್ಸಿ ವರ್ಡ್‍ನಲ್ಲಿ ಟಿಕೇಟುಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98450 14229, 95380 20367 ನ್ನು ಸಂಪರ್ಕಿಸಬಹುದು ಎಂದರು.

145832441 1321283644899719 7811326258271330455 n.jpg? nc cat=107&ccb=2& nc sid=8bfeb9& nc ohc=5 9KMoecZiIAX UbL3C& nc ht=scontent.fblr4 2

ನಾಟಕೋತ್ಸವದ ಉದ್ಘಾಟನೆ

ಫೆ.5 ರ ಸಂಜೆ 6.30ಕ್ಕೆ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ನಾಟಕೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ ಹಿರೇಮಾಗಡಿ, ವಿಕಸಂ ಅಧ್ಯಕ್ಷ ಬಿ.ಅಶೋಕ್, ನಮ್ಮಹಳ್ಳಿ ಥಿಯೇಟರ್‍ನ ಅಧ್ಯಕ್ಷ ಪ್ರವೀಣ್ ಹಾಲ್ಮತ್ತೂರು ಇರಲಿದ್ದಾರೆ.

ಫೆ.7 ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ರಂಗಕರ್ಮಿ ಬಿ.ವಿ.ತಿಪ್ಪಣ್ಣ ಮತ್ತಿತರರು ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಮಧುಸೂದನ್ ಇದ್ದರು.

144957548 1056712918141951 60228706489576919 o.jpg? nc cat=108&ccb=2& nc sid=730e14& nc ohc=6oC0bfPUnqwAX8gzSsw& nc ht=scontent.fblr4 3

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment