ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

Sunrise Facility Services, Sri sai Trust Shimoga

ಶಿವಮೊಗ್ಗ: ವಿವಿಧ ದೇಶಗಳ ನಡುವೆ ಉಂಟಾಗುತ್ತಿರುವ ಯುದ್ಧ ಮತ್ತು ಸಂಘರ್ಷಗಳು ಮಾನವ ಕುಲಕ್ಕೆ ಮಾರಕವಾಗಿವೆ. ಯುದ್ದ ತಪ್ಪಿಸಿ ಶಾಂತಿಯ (global peace) ಮಾರ್ಗವನ್ನು ಅನುಸರಿಸೋಣ ಎಂದು ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಹಾಗೂ ಕಮಲಾ ನೆಹರು ರಾಷ್ಟ್ರೀಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಯುದ್ದ ಮಾನವ ಲೋಕದಲ್ಲಿನ ಮಾಯದ ಗಾಯ. ಸಾವಿರಾರು ನಿರಪರಾಧಿಗಳು, ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮನೆ, ಮೂಲ ಸೌಕರ್ಯ, ಪ್ರಕೃತಿ ಸಂಪತ್ತು ನಾಶವಾಗುತ್ತಿವೆ. ದೇಶಗಳ ಆರ್ಥಿಕ ಸ್ಥಿತಿ ಕುಸಿಯುತ್ತಿವೆ. ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದೆ.

ATNCC-and-NES-Students-submit-memorandum-to-DC-for-World-Peace.

ATNCC-and-NES-Students-submit-memorandum-to-DC-for-World-Peace.

ಈ ಹಿನ್ನೆಲೆ ಶಾಂತಿಯ ಮಹತ್ವವನ್ನು ಅರಿತು, ಸಮಸ್ಯೆಗಳನ್ನು ಹಿಂಸೆಯ ಬದಲು ಸ್ನೇಹ ಭಾವದಿಂದ ಪರಿಹರಿಸಬೇಕು. ರಾಷ್ಟ್ರಗಳು ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ ನಮ್ಮಲ್ಲಿ ಶಾಂತಿ, ಸೌಹಾರ್ದತೆ ಕಲಿಸಿದೆ. ಯುದ್ಧ ಸಮಸ್ಯೆಗಳ ಪರಿಹಾರವಲ್ಲ, ಶಾಂತಿಯೆ ಶಾಶ್ವತ ಪರಿಹಾರ ಎಂದು ವಿದ್ಯಾರ್ಥಿಗಳು ಹೇಳಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸಿಬ್ಬಂದಿಯನ್ನು ಅಡ್ಡಗಟ್ಟಿ ದೊಣ್ಣೆಯಿಂದ ದಾಳಿ

ಉಪನ್ಯಾಸಕರಾದ ಪ್ರವೀಣ್, ಶ್ರೀಲಲಿತಾ, ಸ್ಮಿತಾ ರೂಪೇಶ್, ನಕ್ಷಾ, ಸೌಪರ್ಣಿಕಾ, ಗಾಯತ್ರಿ, ರಾಘವೇಂದ್ರ, ರಶ್ಮಿ, ಭಾರತಿ ದಯಾನಂದ, ಡಾ. ಬಸವಾರಾಜ್, ಎಸ್.ಮಂಜು ಸೇರಿದಂತೆ ಮತ್ತಿತರರು ಇದ್ದರು.

Leave a Comment