SHIMOGA | ಹಾರನಹಳ್ಳಿಯಲ್ಲಿ ರೈಲ್ವೆ ಜಂಕ್ಷನ್ ಸ್ಥಾಪನೆಗೆ ಆಗ್ರಹ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021

ಶಿವಮೊಗ್ಗ – ರಾಣೆಬೆನ್ನೂರು ರೈಲ್ವೆ ಮಾರ್ಗದಲ್ಲಿ ಬರುವ ಹಾರನಹಳ್ಳಿಯಲ್ಲಿ ಜಂಕ್ಷನ್ ನಿರ್ಮಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾರನಹಳ್ಳಿ ರೈಲ್ವೆ ಜಂಕ್ಷನ್ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸ್ಥಳೀಯರು, ಶಿವಮೊಗ್ಗ- ಹಾರನಹಳ್ಳಿ – ಸೂರಗೊಂಡನಕೊಪ್ಪ –ಶಿಕಾರಿಪುರ – ರಾಣೇಬೆನ್ನೂರು – ಹೊಸ ಬಿ.ಜಿ. ರೈಲ್ವೆ ಮಾರ್ಗವನ್ನು ಮಾಡಿ,  ಹಾರನಹಳ್ಳಿಗೆ ಜಂಕ್ಷನ್ ನೀಡಬೇಕು ಎಂದು ಒತ್ತಾಯಿಸಿದರು.

ಈ ರೈಲ್ವೆ ಮಾರ್ಗ ಕೊನಗವಳ್ಳಿಯಿಂದ ತಿರುವು ಪಡೆಯುತ್ತದೆ. ಕೇವಲ 2 ಕಿ.ಮೀ. ದೂರದಲ್ಲಿರುವ ಹಾರನಹಳ್ಳಿ ಕ್ರಾಸಿಂಗ್ ಮಾಡಿ ಹಾರನಹಳ್ಳಿಗೆ ಜಂಕ್ಷನ್ ನೀಡಿ, ಮಾರ್ಗವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ದುರ್ಗೋಜಿರಾವ್, ಗೌರವಾಧ್ಯಕ್ಷ ಗಾಜನೂರು ಷಣ್ಮುಕಪ್ಪ, ಜಯಪ್ಪ, ವಿರೇಶ್, ಜಗದೀಶ್ವರಯ್ಯ, ಭೋಜನಾಯ್ಕ ಮೊದಲಾದವರಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment