ಶಿವಮೊಗ್ಗ ಲೈವ್.ಕಾಂ | SHIMOGA NEWS | 06 FEBRUARY 2021
ಕಲ್ಲಗಂಗೂರು ಸ್ಪೋಟ ಕೇಸ್‍ನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಗುರುತು ಈತನಕ ಪತ್ತೆಯಾಗಿಲ್ಲ. ಸ್ಪೋಟದಿಂದ ದೇಹ ಛಿದ್ರ ಛಿದ್ರವಾಗಿದ್ದು, ಹತ್ತು ಭಾಗ ಸಿಕ್ಕಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಇದನ್ನೂ ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಕ್ರಷರ್ ಜಾಗದ ಮಾಲೀಕ, ಆತನ ಮಗ ಅರೆಸ್ಟ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಸ್ಪೋಟದಲ್ಲಿ ಅರು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಐವರ ಗುರುತು ಸಿಕ್ಕಿದೆ. ಮತ್ತೊಬ್ಬ ವ್ಯಕ್ತಿಯ ದೇಹ ಛಿದ್ರವಾಗಿದೆ. ಆದ್ದರಿಂದ ಅವರ ಮಾಹಿತಿ ಲಭ್ಯವಾಗಿಲ್ಲ ಎಂದರು.
ಹತ್ತು ಭಾಗ, ಪ್ರತ್ಯೇಕ ಅಂತ್ಯಕ್ರಿಯೆ
ಸ್ಪೋಟದ ರಭಸಕ್ಕೆ ಆರನೆ ವ್ಯಕ್ತಿಯ ದೇಹ ಸಂಪೂರ್ಣ ಛಿದ್ರವಾಗಿದೆ. ಹತ್ತು ಭಾಗ ಪತ್ತೆಯಾಗಿದೆ. ಅವನ್ನು ಪ್ರತ್ಯೇಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದರು. ಅಲ್ಲದೆ, ಆರನೆ ವ್ಯಕ್ತಿಯ ಗುರುತು ಪತ್ತೆಗೆ ಡಿಎನ್‍ಎ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
52 ಮಂದಿ ಡಿಎನ್‍ಎ ಮಾದರಿ
ಗುರುತು ಪತ್ತೆಗೆ 52 ಮಂದಿಯ ಡಿಎನ್‍ಎ ಮಾದರಿಯನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ. ಈ ಮಾದರಿಯನ್ನು ಬೆಂಗಳೂರಿನ ಎಫ್‍ಎಸ್‍ಎಲ್ ಲ್ಯಾಬ್‍ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಖಚಿತತೆ ಲಭಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಕಲ್ಲಗಂಗೂರು ಸ್ಪೋಟ ಕೇಸ್, ಸ್ಪೋಟಕ ಪೂರೈಕೆ ಮಾಡಿದ್ದ ಅಪ್ಪ, ಮಗ ಮುಂಬೈನಲ್ಲಿ ಅರೆಸ್ಟ್
ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು